(ನ್ಯೂಸ್ ಕಡಬ) newskadaba.com ಜು. 21. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 19 ರ ವರೆಗೆ 18,03,575 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 9,93,147 ಫಾರ್ಮ್‍ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ:
ಬೆಳ್ತಂಗಡಿ-143697, ಮೂಡಬಿದ್ರೆ-125028, ಮಂಗಳೂರು ನಗರ ಉತ್ತರ-126346, ಮಂಗಳೂರು ನಗರ ದಕ್ಷಿಣ-128809, ಮಂಗಳೂರು-155497, ಬಂಟ್ವಾಳ-128708, ಪುತ್ತೂರು-133645, ಸುಳ್ಯ-147770.









