(ನ್ಯೂಸ್ ಕಡಬ) newskadaba.com ಕಡಬ, ಜು. 15. ಸುನ್ನೀ ವಿದ್ಯಾರ್ಥಿ ಸಂಘಟನೆಯಾದ ಎಸ್ಸೆಸ್ಸೆಫ್ ಪ್ರತಿವರ್ಷವೂ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ಕಲಾ ಸ್ಪರ್ಧಾ ಸಂಗಮಗಳನ್ನು ದೇಶದಾದ್ಯಂತ ನಡೆಸುತ್ತಿದ್ದು, ಅದರ ಕಡಬ ಸೆಕ್ಟರ್ ಮಟ್ಟದ ಕಾರ್ಯಕ್ರಮವು ಇದೇ ಬರುವ ಜುಲೈ 19ನೇ ತಾರೀಖಿನಂದು ಕಡಬ ಅಡ್ಡಗದ್ದೆಯಲ್ಲಿರುವ ಸುನ್ನೀ ಸೆಂಟರ್ ಅಂಗಣದಲ್ಲಿ ನಡೆಯಲಿದೆ.
ನಾಡಿನ ಭರವಸೆಯಾಗಿ ಬೆಳೆದು ಬರುತ್ತಿರುವ ವಿಧ್ಯಾರ್ಥಿಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಹಾಗೂ ಅವರನ್ನು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಸಮೂಹದಲ್ಲಿ ಗುರುತಿಸಲು ಬೇಕಾಗಿ ಕಾರ್ಯಾಚರಿಸುತ್ತಿರುವ ವಿಧ್ಯಾರ್ಥಿ ಸಂಘಟನೆಯಾಗಿದೆ ಎಸ್ಸೆಸ್ಸೆಫ್. ಕಳೆದ 50 ವರುಷಗಳಿಂದ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯು ಈವರೆಗೆ ವಿಧ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಸಾವಿರಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು ವಿಧ್ಯಾರ್ಥಿಗಳ ಬದುಕನ್ನು ಬೆಳಗಿದ್ದು ಇತಿಹಾಸ..
ಬಡವರ ದ್ವನಿಯಾಗಿ, ದೀನದಲಿತರ ಭರವಸೆಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನ ಬದ್ದರಾದ ಪ್ರಬುದ್ದ ಸಮಾಜವನ್ನು ನಿರ್ಮಿಸುವಲ್ಲಿ ಎಸ್ಸೆಸ್ಸೆಫಿನ ಕಾರ್ಯಾಚರಣೆಗಳು ನಿಜಕ್ಕೂ ಶ್ಲಾಘನೀಯ..
ಒಟ್ಟು ಎಂಟು ಯೂನಿಟ್ ಗಳಿಂದ ನೂರಾರು ವಿಧ್ಯಾರ್ಥಿಗಳು 60ರಷ್ಟು ಕಾರ್ಯಕ್ರಮಗಳಲ್ಲಿ ಸ್ಪರ್ದಿಸಲಿದ್ದು ವಿಧ್ಯಾರ್ಥಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ನೇತಾರರಾದ ಸಯ್ಯಿದ್ ಹಮೀದ್ ತಂಙಳ್ ಮರ್ದಾಳ ರವರ ನೇತೃತ್ವದಲ್ಲಿ ಎಸ್.ವೈಎಸ್, ಎಸ್ಸೆಸ್ಸೆಫ್, ಮುಸ್ಲಿಮ್ ಜಮಾಅತ್ ಸೇರಿದಂತೆ ಸುನ್ನೀ ಸಂಘ ಕುಟುಂಬದ ನೇತಾರರ ಹಾಗೂ ಕಾರ್ಯಕರ್ತರ ಸಂಘವೊಂದು ಕಾರ್ಯಕ್ರಮದ ಯಶಸ್ವಿಗಾಗಿ ಹಗಲುರಾತ್ರಿಯೆನ್ನದೆ ಶತಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.









