(ನ್ಯೂಸ್ ಕಡಬ) newskadaba.com ಜು. 10. ಜಿ.ಟಿ.ಟಿ.ಸಿ. ಬೈಕಂಪಾಡಿ, ಮಂಗಳೂರು ಡಿಪ್ಲೋಮಾ ಕಾಲೇಜಿನಲ್ಲಿ ಒಂದು ವರ್ಷದ ಟೂಲ್ ರೂಮ್ ಮೆಶಿನಿಸ್ಟ್ ಕೋರ್ಸ್ ಲಭ್ಯವಿರುತ್ತದೆ. ಈ ಕೋರ್ಸ್ ನಲ್ಲಿ ಯಾಂತ್ರಿಕ ಉತ್ಪಾದನೆಗೆ ಸಂಬಂಧಿಸಿದ ಯಂತ್ರಗಳಾದ ಲೇತ್, ಮಿಲ್ಲಿಂಗ್ ಮೆಶಿನ್, ಡ್ರಿಲ್ಲಿಂಗ್ ಮೆಶಿನ್ ಮತ್ತು ಗ್ರೈಂಡಿಂಗ್ ಮೆಶಿನ್ ಇತ್ಯಾದಿಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ.
ಈ ಕೋರ್ಸ್ ಗೆ ಎಸ್.ಎಸ್.ಎಲ್.ಸಿ ಪಾಸ್ ಅಥವಾ ಫೇಲ್ ಆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಈ ಕೋರ್ಸ್ ಉದ್ಯೋಗಾಧಾರಿತವಾಗಿದ್ದು, ಪ್ರಸ್ತುತ ಸ್ಥಳಿಯ ಕೈಗಾರಿಕೆಗಳಲ್ಲಿ ಬಹು ಬೇಡಿಕೆಯುಳ್ಳದ್ದಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಜಿ.ಟಿ.ಟಿ.ಸಿ ಸಂಸ್ಥೆಯನ್ನು (ದೂ.ಸಂ: 0824-2408003, 9008263660, 7899070548) ಸಂಪರ್ಕಿಸಬಹುದು ಎಂದು ಜಿ.ಟಿ.ಟಿ.ಸಿ. ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









