ಕಂಬಳ ಲೋಕದ ಧ್ವನಿ ನಿರಂಜನ್ ರೈ ಮಠಂದಬೆಟ್ಟು ಇನ್ನಿಲ್ಲ: ಸಭೆಯ ನಡುವೆಯೇ ಹೃದಯಾಘಾತ



(ನ್ಯೂಸ್‌ ಕಡಬ) newskadaba.com,  ಜು.09  ಪುತ್ತೂರು: ಪುತ್ತೂರು ಭೂ ನ್ಯಾಯಮಂಡಳಿ ಸದಸ್ಯ ಹಾಗೂ ಪ್ರಸಿದ್ಧ ಕಂಬಳ ವ್ಯಾಖ್ಯಾನಕಾರರಾದ ನಿರಂಜನ್ ರೈ ಮಠಂದಬೆಟ್ಟು (ಜುಲೈ 8) ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.







ಪುತ್ತೂರು ಸಹಾಯಕ ಆಯುಕ್ತರ (AC) ಕಚೇರಿಯಲ್ಲಿ ಎಸಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಭೂ ನ್ಯಾಯಮಂಡಳಿ ಸಭೆ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸಭೆಯ ನಡುವೆ ನಿರಂಜನ್ ರೈ ಅವರು ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಹಾಯಕ ಆಯುಕ್ತರು, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.






ಭೂ ನ್ಯಾಯಮಂಡಳಿ ಸೇವೆಯ ಜೊತೆಗೆ, ಕಂಬಳ ಕ್ಷೇತ್ರದಲ್ಲಿ ಜನಪ್ರಿಯ ನಿರೂಪಕರಾಗಿ ಗುರುತಿಸಿಕೊಂಡಿದ್ದ ನಿರಂಜನ್ ರೈ ಅವರ ಹಠಾತ್ ನಿಧನಕ್ಕೆ ಗಣ್ಯರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top