ಜನರನ್ನು ಉದ್ರೇಕಗೊಳಿಸಿ ಕರಾವಳಿ ಪ್ರದೇಶವನ್ನು ಹಾಳು ಮಾಡುವಂತಹಾ ಘಟನೆ ಇನ್ಮುಂದೆ ನಡೀಲಿಕ್ಕೆ ಸಾಧ್ಯವಿಲ್ಲ..!! ► ಮತೀಯವಾದಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ ಸಿಎಂ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.26. ಬಹುಮತ ಸಾಬೀತುಪಡಿಸಿದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ‌ ಮಾಡದಿದ್ದಲ್ಲಿ ಸೋಮವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಿದ ವಿಪಕ್ಷ ನಾಯಕ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಬಿಎಸ್ವೈ ಭಾಷಣ‌ ಮುಗಿಸಿ ಸಭಾ ತ್ಯಾಗ ಮಾಡಿದ ನಂತರ ಮಾತನಾಡಿದ ಕುಮಾರಸ್ವಾಮಿ,
ಸೋಮವಾರದೊಳಗೆ ಸಾಲಮನ್ನಾ ಮಾಡದಿದ್ದಲ್ಲಿ ಕರ್ನಾಟಕ ಬಂದ್ ಮಾಡುತ್ತಾರಂತೆ. ಇಂತಹಾ ಹಲವು ಬಂದ್ ಗಳನ್ನು ನನ್ನ ರಾಜಕೀಯ ಜೀವನದಲ್ಲಿ ನಾನು ನೋಡಿದ್ದೇನೆ. ಈ ರೀತಿ ಜನಗಳನ್ನು ಇವರೇನಾದರೂ ಉದ್ರೇಕಗೊಳಿಸಿ, ಅಲ್ಲೆಲ್ಲಾ ಕರಾವಳಿ ಪ್ರದೇಶ ಹಾಳು ಮಾಡಿಟ್ಟಿದ್ದಾರಲ್ಲ. ಅಂತಹ ಘಟನೆ ಇನ್ಮುಂದೆ ರಾಜ್ಯದಲ್ಲಿ ನಡೀಲಿಕ್ಕೆ ಸಾಧ್ಯವಿಲ್ಲ. ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ನಾನು ಎಷ್ಟು ದಿವಸ ಅಧಿಕಾರದಲ್ಲಿ ಇರುತ್ತೇನೆ ಎನ್ನುವುದು ಮುಖ್ಯವಲ್ಲ. ವಾಜಪೇಯಿ ಬೆಂಬಲ ಕೊಟ್ಟಿದ್ದನ್ನು ತಿರಸ್ಕಾರ ಮಾಡಿ ಬಂದವರು ದೇವೇಗೌಡ್ರು. ಆ ಕುಟುಂಬದಿಂದ ಬಂದವನು ನಾನು. ಅಧಿಕಾರಕ್ಕೋಸ್ಕರ ಹಪಹಪಿಸುತ್ತಿಲ್ಲ ಎಂದಿದ್ದಾರೆ.

Also Read  ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಡಾ. ಅಲೋಕ್ ಮೋಹನ್ ನೇಮಕ

error: Content is protected !!
Scroll to Top