(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಜುಲೈ-2026ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ.
ತರಬೇತಿ ವಿವರ: ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ ಜುಲೈ 7 ರಿಂದ ರಿಂದ ಜುಲೈ 8 ರವರೆಗೆ ಮತ್ತು ಕೋಳಿ ಸಾಕಾಣಿಕೆ ತರಬೇತಿ ಜುಲೈ 21 ರಿಂದ 22 ರವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಆಸಕ್ತ ರೈತ ಬಾಂಧವರು ತಮ್ಮ ತಾಲೂಕಿನ ಅಧಿಕಾರಿಗಳನ್ನು (ದೂ.ಸಂಖ್ಯೆ ಮಂಗಳೂರು ತಾಲೂಕು – 9243306956/ 0824-2950369, ಉಳ್ಳಾಲ ತಾಲೂಕು – 9880424077, ಮುಲ್ಕಿ ತಾಲೂಕು –8971024282, ಮೂಡಬಿದ್ರೆ ತಾಲೂಕು – 7204271943, ಬಂಟ್ವಾಳ ತಾಲೂಕು –9448253010, ಬೆಳ್ತಂಗಡಿ ತಾಲೂಕು – 9481963820, ಪುತ್ತೂರು ತಾಲೂಕು – 9483920208, ಕಡಬ ತಾಲೂಕು – 9483922594, ಸುಳ್ಯ ತಾಲೂಕು – 9844995078) ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ













