ರಾಜ್ಯದಲ್ಲಿ ಮನೆ-ಮನೆ ಮತದಾರರ ಸಮೀಕ್ಷೆ ಆರಂಭ: ಮೊದಲ ದಿನವೇ ದಾಖಲೆಯ 54 ಲಕ್ಷಕ್ಕೂ ಅಧಿಕ ನಮೂನೆಗಳ ವಿತರಣೆ!



(ನ್ಯೂಸ್‌ ಕಡಬ) newskadaba.com, ಜು.02  ಮೊದಲ ದಿನವೇ ಅಭೂತಪೂರ್ವ ಪ್ರಗತಿ ದಾಖಲಾಗಿದೆ. ಜುಲೈ 1ರ ಸಂಜೆ 6 ಗಂಟೆಯ ಅವಧಿಗೆ ಒಟ್ಟು 54,68,607 ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಇದು ರಾಜ್ಯದ ಒಟ್ಟು ಮತದಾರರ (5,54,32,314) ಶೇಕಡಾ 9.87 ರಷ್ಟಾಗಿದೆ.







ಮನೆ-ಮನೆ ಸಮೀಕ್ಷೆಯ ಮೂಲಕ ಸಂಗ್ರಹಿಸಲಾದ ಮಾಹಿತಿಯ ಪೈಕಿ ಮೊದಲ ದಿನವೇ 2,38,453 ನಮೂನೆಗಳನ್ನು (0.43%) ಯಶಸ್ವಿಯಾಗಿ ಡಿಜಿಟಲ್‌ ರೂಪಕ್ಕೆ ಪರಿವರ್ತಿಸಲಾಗಿದೆ.ಒಟ್ಟು 26,213 ಮತದಾರರು (0.05%) ಆನ್‌ಲೈನ್‌ ತಂತ್ರಜ್ಞಾನದ ಮೂಲಕ ತಮ್ಮ ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ.






ಮೊದಲ ದಿನದ ಪರಿಶೀಲನೆಯಲ್ಲಿ 2,565 ವಿಶೇಷ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 1,383 ಮೃತ ಮತದಾರರು, 816 ಶಾಶ್ವತವಾಗಿ ಸ್ಥಳಾಂತರಗೊಂಡವರು, ಮತ್ತು 327 ಇತರ ಕ್ಷೇತ್ರಗಳಲ್ಲಿ ನೋಂದಾಯಿತರಾದವರ ವಿವರಗಳು ಸೇರಿವೆ.

SIR ಕಾರ್ಯದಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಸಿಬ್ಬಂದಿಗಳ ಪಾರದರ್ಶಕ ಹಾಜರಾತಿಗಾಗಿ ಪ್ರತ್ಯೇಕ ಕರ್ತವ್ಯ ಆ್ಯಪ್‌’ ಜಾರಿಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸದ್ಯ ರಾಜ್ಯಾದ್ಯಂತ ಈ ಮನೆ-ಮನೆ ಸಮೀಕ್ಷೆ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ.

error: Content is protected !!
Scroll to Top