ಇಚಿಲಂಪಾಡಿ: ಪರಿಸರದಲ್ಲಿ ಕಾಡಾನೆ ಹಾವಳಿ ► ಕೆಲವೆಡೆ ಕೃಷಿ ನಾಶ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಇಲ್ಲಿನ ಇಚಿಲಂಪಾಡಿ ಪರಿಸರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸ್ತಳೀಯರನ್ನು ಭಯಭೀತರನ್ನಾಗಿಸಿದೆ.

ಪರಿಸರದಲ್ಲಿ ಕಾಡಾನೆಗಳು ಹಲವರ ಕೃಷಿ ತೋಟಗಳಿಗೆ ದಾಳಿ ಮಾಡಿ ಕೃಷಿ ಹಾನಿಗೊಳಿಸಿದೆಯೆನ್ನಲಾಗಿದೆ. ಇಚ್ಲಂಪಾಡಿ ನಿವಾಸಿ ಆನಂದ ಪೂಜಾರಿ ಎಂಬವರ ತೋಟಕ್ಕೆ ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಬಾಳೆ, ಅಡಿಕೆ ಕೃಷಿಗಳನ್ನು ಹಾನಿಗೊಳಿಸಿದೆ. ರಾತ್ರಿ ವೇಳೆ ಆನೆ ತೋಟದಲ್ಲಿಯೇ ಇರುವುದರಿಂದ ಅಸುಪಾಸಿನ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಗಮನ ಹರಿಸಬೇಕಿದೆ.

Also Read  ಗೂನಡ್ಕ: ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ

error: Content is protected !!
Scroll to Top