(ನ್ಯೂಸ್ ಕಡಬ) newskadaba.com ಜೂ. 29. ಪ್ರತಿಷ್ಠಿತ ‘ಬ್ಯಾರಿ ವೆಲ್ಫೇರ್ ಅಸೋಸಿಯೇಷನ್’ ಬೆಂಗಳೂರು ವತಿಯಿಂದ ಆಯೋಜಿಸಲಾಗಿರುವ ‘ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ 2026’ ಇಂದು ಬೆಂಗಳೂರಿನಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ, ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಮರುಮೌಲ್ಯಮಾಪನದ ಮೂಲಕ ಅತ್ಯುತ್ತಮ ಅಂಕಗಳನ್ನು ಗಳಿಸಿ, ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಆಯಿಷತ್ ಫಾಹಿಮಾ ಅವರಿಗೆ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ. ಆಯಿಷತ್ ಫಾಹಿಮಾ ಅವರು ನೆಲ್ಯಾಡಿಯ ನೋಟರಿ ವಕೀಲರಾದ ಹಾಜಿ ಇಸ್ಮಾಯಿಲ್ ಮತ್ತು ಮಾಜಿದಾ ದಂಪತಿಯ ಪುತ್ರಿಯಾಗಿದ್ದಾರೆ.
ಇಂಗ್ಲಿಷ್ : 89 ರಿಂದ 92 ಅಂಕಗಳಿಗೆ ಏರಿಕೆ, ಬಿಸಿನೆಸ್ ಸ್ಟಡೀಸ್ : 95 ರಿಂದ 100 ಅಂಕಗಳಿಗೆ ಏರಿಕೆ, ಅಕೌಂಟೆನ್ಸಿ: 98 ರಿಂದ 99 ಅಂಕಗಳಿಗೆ ಏರಿಕೆ.. ಒಟ್ಟಾರೆ ಅಂಕಗಳು 577 ರಿಂದ 586ಕ್ಕೆ ಏರಿಕೆಯಾಗಿದ್ದು, ಕಾಲೇಜಿನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ವಿದ್ಯಾಸಂಸ್ಥೆಯ ಸಂಚಾಲಕರಾದ ಫಾ.ನೋಮಿಸ್ ಕುರಿಯಾಕೋಸ್, ಕಾಲೇಜಿನ ಪ್ರಾಂಶುಪಾಲ ಎಲಿಯಾಸ್ ಎಂ.ಕೆ. ಹಾಗೂ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.













