ನರಿಮೊಗರು: ರೈಲ್ವೇ ಮೇಲ್ಸೇತುವೆಗೆ ಆ್ಯಕ್ಟಿವಾ ಢಿಕ್ಕಿ ► ಅಂಚೆ ಪಾಲಕ ಮೃತ್ಯು



(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.25. ರೈಲ್ವೇ ಮೇಲ್ಸೇತುವೆಗೆ ದ್ವಿಚಕ್ರ ವಾಹನವೊಂದು ಢಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ಕಾಣಿಯೂರು – ಪುತ್ತೂರು ರಸ್ತೆಯ ನರಿಮೊಗರು ಗಡಿಪಿಲ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.







ಮೃತ ಸವಾರನನ್ನು ಪುತ್ತೂರಿನ ಅಂಚೆಪಾಲಕ ಕಾಣಿಯೂರು ಮಠತ್ತಾರು ಚೋಮ ಎಂಬವರ ಪುತ್ರ ತನಿಯ ಮಾಯಿಲ(55) ಎಂದು ಗುರುತಿಸಲಾಗಿದೆ. ಎಂದಿನಂತೆ ಕರ್ತವ್ಯ ಮುಗಿಸಿ ತನ್ನ ಮನೆಗೆ ತೆರಳುತ್ತಿದ್ದಾಗ ಗಡಿಪಿಲ ಸಮೀಪದ ರೈಲ್ವೇ ಮೇಲ್ಸೇತುವೆಗೆ ಇವರು ಚಲಾಯಿಸುತ್ತಿದ್ದ ಆ್ಯಕ್ಟಿವಾ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top