ಕಡಬ: ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆ



(ನ್ಯೂಸ್ ಕಡಬ) newskadaba.com ಕಡಬ, ಜೂ. 27. ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆಯನ್ನು ಆಚರಿಸಲಾಯಿತು.







ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಸರಸ್ವತೀ ವಿದ್ಯಾಲಯ ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಇವರು ಶಿವಾಜಿ ಮಹಾರಾಜರ ಹುಟ್ಟು, ನಡೆದು ಬಂದ ದಾರಿ ಮತ್ತು ಅವರು ಹಿಂದೂ ಸಾಮ್ರಾಜ್ಯವನ್ನು ಕಟ್ಟಲು ಪಟ್ಟ ಶ್ರಮಗಳ ಕುರಿತು ಮಕ್ಕಳಿಗೆ ಕಥೆಯ ಮೂಲಕ ವಿವರಿಸಿದರು. ದೇಶಪ್ರೇಮ, ಭಕ್ತಿ ಮತ್ತು ಗೌರವವನ್ನು ಬೆಳಿಸಿಕೊಳ್ಳಲು ಶಿವಾಜಿ ಮಹಾರಾಜರು ನಮಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ ವಸಂತ ಕೆ. ಉಪಸ್ಥಿತರಿದ್ದರು.






ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ತೇಜಸ್ ಸ್ವಾಗತಿಸಿ, ಗುರುಕಾರ್ತಿಕ್ ಎ. ಧನ್ಯವಾದಗೈದರು. ಮನೀಶ್ ಡಿ.ಜೆ. ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top