(ನ್ಯೂಸ್ ಕಡಬ) newskadaba.com, ಜೂ.25 ಬಂಟ್ವಾಳ: ಸೇಕ್ರೆಡ್ ಹಾರ್ಟ್ ತೊಡಂಬಿಲ ಚರ್ಚ್ನ ಕ್ಯಾಥೋಲಿಕ್ ಸಭಾ ಘಟಕದ ವತಿಯಿಂದ ಕಲ್ಲಿಗೆ ಗ್ರಾಮದ ಕನಪಾಡಿ ನೋಬರ್ಟ್ ಲೋಬೊ ಅವರ ಮನೆ ಪರಿಸರದಲ್ಲಿ ಜೂನ್ 21ರಂದು ಬೃಹತ್ ಮಳೆಕೊಯ್ಲು ಅಭಿಯಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಚರ್ಚ್ನ ಧರ್ಮಗುರು ವಂದನೀಯ ಆಂಟನಿ ಲೋಬೊ ಅವರು ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮಳೆ ನೀರನ್ನು ಬೋರ್ವೆಲ್ಗಳಿಗೆ ಇಂಗಿಸುವ ಹಾಗೂ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಲ್ಲಿಗೆ ಗ್ರಾಮ ಪಂಚಾಯತ್ ಪಿಡಿಒ ಚಂದ್ರಾವತಿ ಅವರು ಬೋರ್ವೆಲ್ ಮರುಪೂರಣದ ಮಹತ್ವವನ್ನು ವಿವರಿಸಿ, ಈ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಅನುದಾನವನ್ನು ಜನರಿಗೆ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಕ್ಯಾಥೋಲಿಕ್ ಸಭಾ ಸದಸ್ಯ ಫ್ರಾನ್ಸಿಸ್ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.









