(ನ್ಯೂಸ್ ಕಡಬ) newskadaba.com, ಜೂ.22 : ರಾಜ್ಯದ ಸಾರಿಗೆ ನಿಗಮಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ದರ ಪರಿಷ್ಕರಣೆಗೆ ಕೋರಿ KSRTC, BMTC, ಕಲ್ಯಾಣ ಕರ್ನಾಟಕ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.ಶಕ್ತಿ ಯೋಜನೆ ,ಗಣನೀಯವಾಗಿ ಏರಿಕೆಯಾಗಿರುವ ಡೀಸೆಲ್ ದರ ಹಾಗೂ ನೌಕರರ ಸಂಬಳ ಹೆಚ್ಚಳದಿಂದಾಗಿ ನಿಗಮಗಳ ಮೇಲೆ ಭಾರಿ ಆರ್ಥಿಕ ಹೊರೆ ಬಿದ್ದಿದೆ.
ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಅಂದಾಜು 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದ್ದು, ಇದು ವಾರ್ಷಿಕವಾಗಿ 480 ಕೋಟಿ ದಾಟುವ ಆತಂಕ ಎದುರಾಗಿದೆ.ಆರ್ಥಿಕ ಹೊರೆಯನ್ನು ಸರಿದೂಗಿಸಲು ಬಿಎಂಟಿಸಿ ಶೇ. 44 ರಷ್ಟು ಹಾಗೂ ಇತರೆ ಸಾರಿಗೆ ನಿಗಮಗಳು ಶೇ. 33 ರಷ್ಟು ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಮುಂದಿಟ್ಟಿವೆ.
ಈ ಕುರಿತು ಶೀಘ್ರದಲ್ಲೇ ಸಾರಿಗೆ ಸಚಿವರು, ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ. ಹೆಚ್ಚುವರಿ ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ 480 ಕೋಟಿ ರೂಪಾಯಿ ದಾಟುವ ಆತಂಕ ಎದುರಾಗಿದೆ.









