(ನ್ಯೂಸ್ ಕಡಬ) newskadaba.com, ಜೂ.22 ಉಡುಪಿ: ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) 2003 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ, ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ವಿಶೇಷ ತಂಡವು ಇತ್ತೀಚೆಗೆ ಕಾಪು ತಾಲೂಕಿನಾದ್ಯಂತ ಭರ್ಜರಿ ದಾಳಿ ನಡೆಸಿದೆ.
ಅಧಿಕಾರಿಗಳು ಕಾಪು ತಾಲೂಕಿನ ಪಡುಬಿದ್ರಿ ಪಟ್ಟಣ ಮತ್ತು ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳು, ಹೋಟೆಲ್‌ಗಳು, ಬಾರ್ ಹಾಗೂ ರೆಸ್ಟೋರೆಂಟ್‌ಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಒಟ್ಟು 44 ಪ್ರಕರಣಗಳನ್ನು ದಾಖಲಿಸಲಾಗಿದ್ದು, ₹17,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಡಾ. ವಾಸುದೇವ ಉಪಾಧ್ಯಾಯ (ಉಡುಪಿ ತಾಲೂಕು ಆರೋಗ್ಯಾಧಿಕಾರಿ),ಬಸವರಾಜ ಜಾದರ್ ಮತ್ತು ಜಗದೀಶ್ ರಾವ್ (ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು),ಚಂದ್ರಕಲಾ (ಕ್ಷೇತ್ರ ಆರೊಗ್ಯ ಶಿಕ್ಷಣಾಧಿಕಾರಿ),ರವೀಂದ್ರ ನಾಯ್ಕ್ (ತಾಲೂಕು ದೈಹಿಕ ಪರೀಕ್ಷಣಾಧಿಕಾರಿ),ಶ್ರೀಧರ್ ಆರ್. (ಪಡುಬಿದ್ರಿ ಪೋಲಿಸ್ ಠಾಣೆ),ಎನ್.ಪಿ.ಎಲ್ ಸಂಜಯ್ (ಕಾರ್ಮಿಕ ನಿರೀಕ್ಷಕ),ಮಂಜುಳಾ (ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಂಯೋಜಕಿ),ಮಹೇಶ್ ಡಿ. ಭಂಡಾರಿ (ಸಾಮಾಜಿಕ ಕಾರ್ಯಕರ್ತ)…









