ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹೊಸ ಬ್ರೇಕ್ ಇನ್ಮುಂದೆ ಆಧಾರ್ ಜೊತೆ ವೋಟರ್ ಐಡಿ ಲಿಂಕ್ ಕಡ್ಡಾಯ



(ನ್ಯೂಸ್‌ ಕಡಬ) newskadaba.com,ಜೂ.20 : ಬೆಂಗಳೂರು: ರಾಜ್ಯದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಅಕ್ರಮ ಹಾಗೂ ಅನರ್ಹ ಫಲಾನುಭವಿಗಳಿಗೆ ಬ್ರೇಕ್ ಹಾಕಲು ಸರ್ಕಾರ ಹೊಸ ನಿಯಮ ತಂದಿದೆ. ಇನ್ಮುಂದೆ ಗ್ಯಾರಂಟಿ ಸೌಲಭ್ಯ ಪಡೆಯಲು ಆಧಾರ್ ಜೊತೆಗೆ ವೋಟರ್ ಐಡಿ ಲಿಂಕ್ ಮಾಡುವುದು ಕಡ್ಡಾಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.







ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳ ಅರ್ಹತೆ ಪರಿಶೀಲಿಸಲು ಅಧಿಕಾರಿಗಳು ಹೊಸ ಮರುಪರಿಶೀಲನಾ ಅರ್ಜಿಯೊಂದಿಗೆ ನೇರವಾಗಿ ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ವೇಳೆ ರೇಷನ್ ಕಾರ್ಡ್ ಕೂಡ ಕೇಳಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಅಥವಾ ಮತದಾನದ ಹಕ್ಕು ಕಳೆದುಕೊಂಡವರಿಗೆ ಯೋಜನೆಗಳು ಕಟ್ ಆಗಲಿವೆ.






ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ನೀಡಲು ಚಿಂತನೆ ನಡೆಸಲಾಗುತ್ತಿದ್ದು, ಇದೇ ವೇಳೆ ಸಾರಿಗೆ ನಿಗಮಗಳ ₹5,173 ಕೋಟಿ ನಷ್ಟ ಸರಿದೂಗಿಸಲು ಬಸ್ ಟಿಕೆಟ್ ದರ ಹೆಚ್ಚಳ ಮಾಡುವಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಶಿಫಾರಸು ಮಾಡಿದೆ.

error: Content is protected !!
Scroll to Top