ವಿಹಾರಕ್ಕೆ ಬಂದು ಜಲಸಮಾಧಿಯಾದ ಕಾಲೇಜು ವಿದ್ಯಾರ್ಥಿಗಳು: ಕೊಟ್ಟಾಯಂ ಮೂಲದ ಇಬ್ಬರು ಯುವಕರ ಶವ ಪತ್ತೆ



(ನ್ಯೂಸ್‌ ಕಡಬ) newskadaba.com,  ಜೂ.17: ಬೇಕಲ ಪಳ್ಳಿಕೆರೆಯ ರೆಡ್ ಮೂನ್ ಬೀಚ್‌ನಲ್ಲಿ ಸಮುದ್ರಕ್ಕೆ ಇಳಿದಾಗ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಮೃತದೇಹಗಳು ಸೋಮವಾರ ಮಧ್ಯಾಹ್ನ ಚಿತ್ತಾರಿ ನದಿಯಲ್ಲಿ ಪತ್ತೆಯಾಗಿವೆ.







ಮೃತರನ್ನು ಕೊಟ್ಟಾಯಂ ಜಿಲ್ಲೆಯ ಚಂಗನಾಶೇರಿ ನಿವಾಸಿಗಳಾದ ಅಂಕಿತ್ (20) ಮತ್ತು ಅಪ್ಪು ಟಿ. ಅಬ್ರಹಾಂ (20) ಎಂದು ಗುರುತಿಸಲಾಗಿದೆ.ಭಾನುವಾರ ಸಂಜೆ ಈ ಇಬ್ಬರು ಯುವಕರು ತಮ್ಮ ಸ್ನೇಹಿತರೊಡನೆ ಬೀಚ್‌ಗೆ ವಿಹಾರಕ್ಕೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. ಸಮುದ್ರದ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರೂ ಕೊಚ್ಚಿ ಹೋಗಿದ್ದರು.






ಘಟನೆ ನಡೆದ ತಕ್ಷಣ ಕರಾವಳಿ ಕಾವಲು ಪಡೆ ಮತ್ತು ಬೇಕಲ್ ಪೊಲೀಸರು ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರೂ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.ಸೋಮವಾರ ಮಧ್ಯಾಹ್ನದ ವೇಳೆಗೆ ಇಬ್ಬರ ಶವಗಳು ಚಿತ್ತಾರಿ ನದಿಯ ಮುಖಜ ಭೂಮಿಯ ಬಳಿ ಪತ್ತೆಯಾಗಿವೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

error: Content is protected !!
Scroll to Top