(ನ್ಯೂಸ್ ಕಡಬ) newskadaba.com, ಜೂ.13 ಕರಾವಳಿಯಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಮೀನುಗಳು ಆಳ ಸಮುದ್ರದಲ್ಲೇ ಉಳಿದಿವೆ. ದಡದತ್ತ ಬರುತ್ತಿಲ್ಲ.ಮಂಗಳೂರಿನಿಂದ ಉಳ್ಳಾಲದವರೆಗೆ ನಾಡದೋಣಿ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಮೀನಿನ ತೀವ್ರ ಕೊರತೆ ಎದುರಾಗಿದೆ.ಗ್ರಾಹಕರ ನೆಚ್ಚಿನ ಬಂಗುಡೆ ಮೀನಿನ ಬೆಲೆ ಕೆಜಿಗೆ 400 ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ.
ಹವಾಮಾನ ಇಲಾಖೆ ಕಡಿಮೆ ಮಳೆಯ ಮುನ್ಸೂಚನೆ ನೀಡಿದ್ದು, ಪೂರ್ಣ ಪ್ರಮಾಣದ ಮೀನುಗಾರಿಕೆಗೆ ಜುಲೈ 1ರವರೆಗೆ ಕಾಯಬೇಕಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೆರೆ ರಾಜ್ಯಗಳ ‘ಐಸ್ ಮೀನು’ಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಕರಾವಳಿ ಆರ್ಥಿಕತೆ ಕುಸಿಯುವ ಮುನ್ನ ಸರ್ಕಾರ ಮೀನುಗಾರರ ನೆರವಿಗೆ ಬರಬೇಕಿದೆ.









