ಅಮೆರಿಕದಲ್ಲಿ ಪಿಜ್ಜಾ ಡೆಲಿವರಿ ಮಾಡಲು ಹೋದ ಭಾರತೀಯ ಯುವಕನ ಮೇಲೆ ಶೂಟೌಟ್; ಚಿಕಿತ್ಸೆ ಫಲಿಸದೆ ಮೃತ್ಯು!



(ನ್ಯೂಸ್ ಕಡಬ) newskadaba.com,  ಜೂ.08  ವಾಷಿಂಗ್ಟನ್: ಅಮೆರಿಕದ ಫಿಲಡೆಲ್ಫಿಯಾದಲ್ಲಿ ತೆಲಂಗಾಣ ಮೂಲದ 28 ವರ್ಷದ ಅನ್ಶುಲ್ ಕುಂಚ ಎಂಬ ಭಾರತೀಯ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರ ತಂತ್ರದ ಮೂಲಕ ಹತ್ಯೆ ಮಾಡಿದ್ದಾರೆ.ಮಲ್ಟಿನ್ಯಾಷನಲ್ ಕಂಪನಿಯ ಉದ್ಯೋಗಿಯಾಗಿದ್ದ ಅನ್ಶುಲ್, ಪಾರ್ಟ್-ಟೈಮ್ ಆಗಿ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದರು.







ಶನಿವಾರ ತಡರಾತ್ರಿ ನಿರ್ಜನ ಪ್ರದೇಶವೊಂದಕ್ಕೆ ಬಂದ ನಕಲಿ ಆರ್ಡರ್ ನಂಬಿ ಡೆಲಿವರಿ ನೀಡಲು ಹೋದಾಗ, ಹೊಂಚು ಹಾಕಿ ಕುಳಿತಿದ್ದ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅನ್ಶುಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.






ಮೃತರ ಬಳಿಯಿದ್ದ ಹಣವಾಗಲಿ, ಬೆಲೆಬಾಳುವ ವಸ್ತುಗಳಾಗಲಿ ಕಳುವಾಗದಿರುವುದರಿಂದ ಇದು ದರೋಡೆಗಾಗಿ ನಡೆದ ಕೊಲೆಯಲ್ಲ, ಬದಲಿಗೆ ವ್ಯವಸ್ಥಿತ ಸಂಚು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಾಸ್ಕ್ ಧರಿಸಿದ ಇಬ್ಬರು ಶಂಕಿತರು ಪತ್ತೆಯಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!
Scroll to Top