(ನ್ಯೂಸ್ ಕಡಬ) newskadaba.com, ಮೇ.02: ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ವತಿಯಿಂದ ಕೆನರಾ ಇಂಜಿನಿಯರಿಂಗ್ ಇಂಡಸ್ಟ್ರಿಯಲ್ ಟೆಕ್ ಎಕ್ಸ್ಪೋ 2026 ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನ ಸಭಾ ಸಭಾಧ್ಯಕ್ಷರಾದ ಯು ಟಿ ಖಾದರ್, ಮಂಗಳೂರು ಸಂಸದರಾದ ಕ್ಯಾ ಬ್ರಿಜೇಶ್ ಚೌಟ ಇತರ ಗಣ್ಯರು ಸೇರಿ ದೀಪಪ್ರಜ್ವಲಿಸಿ ಚಾಲನೆ ನೀಡಿದರು.
ಈ ವೇಳೆ ಕರ್ನಾಟಕ ವಿಧಾನ ಸಭಾ ಸಭಾಧ್ಯಕ್ಷರಾದ ಯು ಟಿ ಖಾದರ್ ಮಾತನಾಡಿ ಸಮಾಜದಲ್ಲಿ ಶಿಕ್ಷಣ, ನವೀನ ಆವಿಷ್ಕಾರ ಮತ್ತು ಜಾಗೃತಿ ಮೂಡಿಸಲು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಶಿಕ್ಷಣವು ನಿಜವಾದ ಪ್ರಗತಿಯ ಅಡಿಪಾಯವಾಗಿದ್ದು, ವ್ಯಕ್ತಿ ಹಾಗೂ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಆಗಲಿ ಎಂದು ಅವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ಶಾಸಕ ಡಾ ವೈ ಭಾರತ್ ಶೆಟ್ಟಿ, ಅಚಲ್ ಗ್ರೂಪ್ ಚೇರ್ಮನ್ ಜಿ ಗಿರಿಧರ್ ಪ್ರಭು, ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಎಂ ಡಿ ಪೂಜಾರಿ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಮಂಜುನಾಥ್ ಎಸ್ ಸಿಂಗೈ, ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ಸುಬ್ಬ ರಾವ್ ಶ್ರೀಪಥಿ, ಕೆನರಾ ಇಂಜಿನಿಯರಿಂಗ್ ಇಂಡಸ್ಟ್ರಿಯಲ್ ಟೆಕ್ ಎಕ್ಸ್ಪೋ ಚೇರ್ಮನ್ ಎನ್ ಅರುಣ್ ಪಡಿಯಾರ್, ಗರೋಡಿ ಸ್ಟೀಲ್ ಪ್ರೊಪ್ರೈಟರ್ ಮನೋಜ್ ಕುಮಾರ್ ಸರಿಪಲ್ಲ, ಎಂಆರ್ ಪಿಎಲ್ ಜಿಜಿಎಂ ಪ್ರಶಾಂತ್ ಶಂಕರ್, ಎನ್ ಎಂಪಿಎ ಡೆಪ್ಯುಟಿ ಟ್ರಾಫಿಕ್ ಮ್ಯಾನೇಜರ್ ಚಂದ್ರಶೇಖರ್ ಪಾಲೇಕರ್ ಮತ್ತಿತರರು ಉಪಸ್ಥಿತರಿದ್ದರು…









