ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಬಯೋಗ್ಯಾಸ್‌ ಯೋಜನೆ ಅನುಷ್ಠಾನಕ್ಕೆ ಸಜ್ಜು



(ನ್ಯೂಸ್‌ ಕಡಬ) newskadaba.com,  ಎ.20 ಸುಸ್ಥಿರ ನಗರ ಜಲ ನಿರ್ವಹಣೆ ಮತ್ತು ಸಕ್ಯೂ೯ಲರ್ ಎಕಾನಮಿ ನಿಟ್ಟಿನಲ್ಲಿ ಕೊಳಚೆ ನೀರಿನ ತ್ಯಾಜ್ಯವನ್ನು ಆದಾಯದ ಬೃಹತ್‌ ಮೂಲವಾಗಿ ಪರಿವರ್ತಿಸಲು ಜಲಮಂಡಳಿ ಸಜ್ಜಾಗಿದೆ.







ಜಲಮಂಡಳಿಯ ಐದು ಪ್ರಮುಖ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಕಚ್ಚಾ ಜೈವಿಕ ಅನಿಲವನ್ನು ಹೆಚ್ಚಿನ ಮೌಲ್ಯದ ಕಂಪ್ರೆಸ್ಡ್‌ ಬಯೋ-ಗ್ಯಾಸ್‌ ಆಗಿ ಮೇಲ್ದರ್ಜೆಗೇರಿಸುವ ಮೂಲಕ ಮಂಡಳಿಯು ಮುಂದಿನ ಎರಡು ದಶಕಗಳಲ್ಲಿಅಂದಾಜು 120 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸಲಿದೆ.






ಬಯೋ – ಡೈಜೆಸ್ಟರ್‌

ದೇಶದ ಸೂರತ್‌ನಂತಹ ನಗರಗಳಲ್ಲಿ ಕೇವಲ 120 ಎಂಎಲ್‌ಡಿ ಸಾಮರ್ಥ್ಯದ ನೀರಿನ ಬಳಕೆಯೊಂದಿಗೆ ಇಂತಹ ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು, ಜಲಮಂಡಳಿ ಬರೋಬ್ಬರಿ 550 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಬಳಕೆಯೊಂದಿಗೆ ಈ ಬೃಹತ್‌ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಅಲ್ಲದೆ, ಈ ಸಾಮರ್ಥ್ಯವನ್ನು ಗರಿಷ್ಠಗೊಳಿಸಲು, ನಗರದಾದ್ಯಂತ ಯಾವ ಎಸ್‌ಟಿಪಿಗಳಲ್ಲಿ ಬಯೋ – ಡೈಜೆಸ್ಟರ್‌ಗಳಿವೆಯೋ ಅಲ್ಲೆಲ್ಲಾ ಈ ಅತ್ಯಾಧುನಿಕ ಯೋಜನೆಯನ್ನು ವಿಸ್ತರಿಸಲು ಸೂಚಿಸಲಾಗಿದೆ.

ಪ್ರಸ್ತುತ, ಈ ಎಸ್‌ಟಿಪಿಗಳಲ್ಲಿ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಸ್ಥಳೀಯ ವಿದ್ಯುತ್‌ ಉತ್ಪಾದನೆಗೆ ಬಳಸಲಾಗುತ್ತಿದ್ದು, ಈ ಯೋಜನೆಯು ಕಚ್ಚಾ ಜೈವಿಕ ಅನಿಲವನ್ನು ನಗರ ಅನಿಲ ವಿತರಣಾ ಜಾಲಕ್ಕೆ ಪೂರೈಸಲು ಅಥವಾ ಶುದ್ಧ ಸಾರಿಗೆ ಇಂಧನವಾಗಿ ಪೂರೈಸಲು ಉದ್ದೇಶಿಸಿದೆ. ಈ ಮೂಲಕ ಜಲಮಂಡಳಿಗೆ ಒಟ್ಟಾರೆ ಅಂದಾಜು 120 ಕೋಟಿ ರೂ. ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವ :

ಸಾರ್ವಜನಿಕ – ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಖಾಸಗಿ ಪಾಲುದಾರರು ಸಂಪೂರ್ಣ 85 ಕೋಟಿ ರೂ. ಬಂಡವಾಳ ವೆಚ್ಚದ ಜತೆಗೆ ಎಲ್ಲಾಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸಲಿದ್ದಾರೆ. ಮಂಡಳಿಯು ಯೋಜನಾ ಕಾರ್ಯಾಚರಣೆಗಳಿಗಾಗಿ ಎಸ್‌ಟಿಪಿ ಆವರಣದಲ್ಲಿ ಸರಿಸುಮಾರು 13,000 ಚದರ ಮೀಟರ್‌ ಜಾಗ ಒದಗಿಸಲಿದೆ.

error: Content is protected !!
Scroll to Top