ಕಡಬ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ – ಮಳೆ ​► ಅಪಾರ ಪ್ರಮಾಣದ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಡಬ ಪರಿಸರದಲ್ಲಿ ಹಲವರ ಕೃಷಿ ನಾಶಗೊಂಡಿದ್ದು, ಕೆಲವು ಮನೆಗಳಿಗೆ ಹಾನಿಯಾಗಿವೆ.

ಇಲ್ಲಿನ ಬಂಟ್ರ ಗ್ರಾಮದ ರಾತ್ರಿ ಬೀಸಿದ ಭಾರೀ ಗಾಳಿಗೆ ಐಸಮ್ಮ ಹಾಗೂ ಫೌಝಿಯಾ ಎಂಬವರ ಮನೆಯ ಶೀಟುಗಳು ಹಾರಿ ಹೋಗಿದ್ದು, ಮಳೆ ನೀರೆಲ್ಲ ಮನೆಯೊಳಗಡೆ ಸುರಿದಿದೆ. ರಾಧಾಕೃಷ್ಣ ಕೊಲ್ಲೆಸಾಗು ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದ್ದು, 30 ಕ್ಕೂ ಅಧಿಕ ರಬ್ಬರ್ ಮರಗಳು ನೆಲಕ್ಕುರುಳಿವೆ. ಹರೀಶ್ ಕೊಲ್ಲೆಸಾಗು ಎಂಬವರ ಹಟ್ಟಿಗೆ ಮರ ಬಿದ್ದು ಹಟ್ಟಿಗೆ ಹಾನಿಯಾದರೂ ದನ ಕರುಗಳು ಪವಾಡ ಸದೃಶ ಪಾರಾಗಿವೆ. ದಯಾನಂದ ಅಂಬರಬೆಟ್ಟು ಎಂಬವರ 25 ಅಡಿಕೆ‌ ಮರಗಳು, ಗಣೇಶ್ ಎಂಬವರ 15 ಕ್ಕೂ ಹೆಚ್ಚು ರಬ್ಬರ್ ಮರಗಳು, ವಾಸುದೇವ ಬೈಪಾಡಿತ್ತಾಯ ಎಂಬವರ 20 ಕ್ಕೂ ಹೆಚ್ಚಿನ ರಬ್ಬರ್ ಮರಗಳು ಹಾಗೂ 50 ಕ್ಕೂ ಹೆಚ್ಚಿನ ಅಡಿಕೆ ಮರಗಳು, ಶಂಕರ ನಾರಾಯಣ ಬೈಪಾಡಿತ್ತಾಯ ಎಂಬವರ 75 ಕ್ಕೂ ಹೆಚ್ಚಿನ ಅಡಿಕೆ ಮರಗಳು ಹಾಗೂ 20 ಕ್ಕೂ ಹೆಚ್ಚಿನ ರಬ್ಬರ್ ಮರಗಳು ಹಾಗೂ ಜಿನಿತ್ ಎಂಬವರ ಶೆಡ್ ಗೆ ಮರ ಬಿದ್ದು ರಬ್ಬರ್ ಶೀಟ್ ತಯಾರಿಸುವ ಯಂತ್ರಕ್ಕೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟವುಂಟಾಗಿದೆ.

Also Read  ಮ0ಗಳೂರು: ಮಧ್ಯಸ್ಥಿಕೆದಾರರಿಗೆ ಪುನಶ್ಚೇತನ ತರಬೇತಿ

error: Content is protected !!
Scroll to Top