ಉಡುಪಿ : ಸಂಸ್ಥೆಯ ಮುಖ್ಯಸ್ಥರೊಬ್ಬರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಒಬ್ಬ ಆರೆಸ್ಟ್



(ನ್ಯೂಸ್ಕಡಬ) newskadaba.com,   ಫೆ.24: ಶಾಲಾ ಮಕ್ಕಳಿಗೆ ಸಂವಹನ ಕೌಶಲ ತರಬೇತಿ ನೀಡುವ ನಗರದ ಸಂಸ್ಥೆಯೊಂದರ ಮುಖ್ಯಸ್ಥರನ್ನು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಖಾಸಗಿ ವೀಡಿಯೋ ಇದೆ ಎಂದು ಬ್ಲ್ಯಾಕ್ ಮೇಲ್ ಮಾಡಿ ಈಗ ಬಂಧಿತನಾಗಿದ್ದಾನೆ.





ಆರೋಪಿ ಉಡುಪಿ ಕಾಪುವಿನ ಅಭಿಷೇಕ್‌ ಸುರೇಂದ್ರ ಪೂಜಾರಿ ಬಂಧಿತ. ಮಾರ್ಫ್‌ ಮಾಡಲಾದ ವೀಡಿಯೋ ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಸಂಸ್ಥೆ ಮಾಲಕರ ಪುತ್ರಿ ನೀಡಿದ ದೂರಿನನ್ವಯ ಉರ್ವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ……






ಆರೋಪಿಯು ಮತ್ತೆ 2025ರ ಡಿಸೆಂಬರ್‌ನಲ್ಲಿ ಮಾಲಕರ ಪುತ್ರಿಯ ಬಳಿ ಬಂದು 2 ಕೋಟಿ ರೂ. ಹಣಕ್ಕೆ ಬೇಡಿಕೆ ಇರಿಸಿ, ಹಣ ನೀಡದಿದ್ದರೆ ಇನ್ನು ಕಾಯುವುದಿಲ್ಲ, ಖಾಸಗಿ ವೀಡಿಯೋ ವೈರಲ್‌ ಮಾಡುತ್ತೇನೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದ. ಅಲ್ಲದೆ ಮಾಲಕರ ಖಾಸಗಿ ವೀಡಿಯೋಗಳನ್ನು ಮಂಗಳೂರು, ಉಡುಪಿಯ ಕೆಲವು ಶಾಲೆಗಳ ಪ್ರಾಂಶುಪಾಲರಿಗೆ ವ್ಯೂ ಒನ್ಸ್‌ ಆಯ್ಕೆಯೊಂದಿಗೆ ಕಳುಹಿಸಿದ್ದ.ಆರೋಪಿಯ ಪತ್ನಿ ಶ್ರೀನಿಧಿ ವಿರುದ್ಧವೂ ದೂರು ದಾಖಲಾಗಿದ್ದು, ಆಕೆಯ ಪಾತ್ರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top