ಮಂಗಳೂರು : ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮನೆ



(ನ್ಯೂಸ್ಕಡಬ) newskadaba.com,  ಫೆ.20: ನಗರದ ಕೊಟ್ಟಾರ ಬಳಿಯ ಕಾಲ್ಬಾವಿ ರಸ್ತೆಯ ಸಾಗರ್ ಕೋರ್ಟ್ಸ್ ಬಳಿ ಮನೆಯೊಂದು ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಘಟನೆ ನಡೆದಿದೆ.





ಕೊಟ್ಟಾರ ಬಳಿಯ ಕಾಲ್ಬಾವಿ ರಸ್ತೆಯ ಸಾಗರ್ ಕೋರ್ಟ್ಸ್ ನಲ್ಲಿರುವ ಉದಯ ಕುಮಾರ್ ಎನ್ನುವವರಿಗೆ ಸೇರಿದ ಮನೆಯಾಗಿದ್ದು , ಮುಂಜಾನೆ 3.15 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡು ಮನೆಯಲ್ಲಿ ಮಲಗಿದ್ದ ಉದಯ್ ಕುಮಾರ್ ದಂಪತಿ ಹಾಗು ಇಬ್ಬರು ಮಕ್ಕಳು ಮನೆಯಿಂದ ಹೊರಬಂದಿದ್ದಾರೆ.






ಸರಿಯಾದ ಸಮಯಕ್ಕೆ ಮನೆಯಿಂದ ಹೊರ ಬಂದಿದ್ದರಿಂದ ಮನೆಯವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ಗೆ ಮನೆ ಸಂಪೂರ್ಣ ಹೊತ್ತಿ ಉರಿದಿದೆ. ಬೆಂಕಿ ಕಂಡು ಸ್ಥಳೀಯರು ಹಾಗು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

error: Content is protected !!
Scroll to Top