(ನ್ಯೂಸ್ ಕಡಬ) newskadaba.com, ಫೆ.18: ಖ್ಯಾತ ಶಿಕ್ಷಣ ತಜ್ಞ ಮತ್ತು ಲೋಕೋಪಕಾರಿ ಉದ್ಯಮಿ ಡಾ. ಸಿಎ ಎ. ರಾಘವೇಂದ್ರ ರಾವ್ ಫೆ. 17, ಮಂಗಳವಾರ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.ಶಿಕ್ಷಣ ಕ್ಷೇತ್ರದ ಜೊತೆಗೆ ಆತಿಥ್ಯ ವಲಯದಲ್ಲಿಯೂ ಅವರು ಗುರುತಿಸಿಕೊಂಡರು. 1980ರಲ್ಲಿ ತ್ರಿ-ಸ್ಟಾರ್ ಸಸ್ಯಾಹಾರಿ ಹೋಟೆಲ್ ‘ಶ್ರೀನಿವಾಸ್’ ಅನ್ನು ಸ್ಥಾಪಿಸಿದರು.
ಬಳಿಕ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ತ್ರಿ-ಸ್ಟಾರ್ ಶುದ್ಧ ಸಸ್ಯಾಹಾರಿ ಹೋಟೆಲ್ ಎಂದು ವರ್ಗೀಕರಿಸಲ್ಪಟ್ಟ ಇದು, ಕರ್ನಾಟಕದಲ್ಲಿ ಈ ರೀತಿಯ ಮೊದಲ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಶಿಕ್ಷಣ ಹಾಗೂ ಸಮಾಜಸೇವೆಗೆ ನೀಡಿದ ಕೊಡುಗೆಗಾಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ (2004), ಶಿಕ್ಷಣ ಕ್ಷೇತ್ರದ ಚಿತ್ರಭಾರತಿ ಪ್ರಶಸ್ತಿ ಹಾಗೂ SIRC ವಜ್ರ ಮಹೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಡಾ. ರಾಘವೇಂದ್ರ ರಾವ್ ಅವರು ಪತ್ನಿ ವಿಜಯಲಕ್ಷ್ಮಿ, ಮಗಳು ಪದ್ಮಿನಿ, ಮಗ ಶ್ರೀನಿವಾಸ್ ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಜೀವನಪಯಣವು ಶಿಕ್ಷಣದ ಮೂಲಕ ಸಮಾಜ ನಿರ್ಮಾಣ ಸಾಧ್ಯವೆಂಬ ನಂಬಿಕೆಗೆ ಜೀವಂತ ಉದಾಹರಣೆಯಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಮುಕ್ಕಾ ಕ್ಯಾ೦ಪಸ್ ನಲ್ಲಿ ಆಂತಿಮ ನಮನವನ್ನು ಸಲ್ಲಿಸಲು ಆವಕಾಶ ಮಾಡಿ ಕೊಡಲಾಗಿದೆ.












