ನ್ಯೂಸ್ ಕಡಬ) newskadaba.com, ಫೆ.13 : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಎಪಿಎಲ್ ಕಾರ್ಡ್ಗಳಿಗೂ ಅವಕಾಶ ನೀಡದ ಪರಿಣಾಮ ರೈತರು ನಾನಾ ಕೃಷಿ ಪತ್ತಿನ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ಗಳಲ್ಲಿ ಸೌಲಭ್ಯಗಳನ್ನು ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲ, ರೈತರು, ವಿಶೇಷಚೇತನರು, ಅನಾರೋಗ್ಯಪೀಡಿತರು ಯಶಸ್ವಿನಿ ಕಾರ್ಡ್, ಆಯುಷ್ಮಾನ್ ಭಾರತ್ ಸೇರಿದಂತೆ ಆರೋಗ್ಯ ಕಾರ್ಡ್ಗಳನ್ನು ಮಾಡಿಸಲೂ ಆಗುತ್ತಿಲ್ಲ.
ಕೃಷಿ ಪತ್ತಿನ ಬ್ಯಾಂಕ್ ಹಾಗೂ ಇತರೆ ಕೋ ಆಪರೇಟಿವ್ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಸೇರಿದಂತೆ ಕೆಲವು ಸೇವೆಗಳನ್ನು ಪಡೆಯಲು ಪಡಿತರ ಚೀಟಿ ಕಡ್ಡಾಯವಿದೆ. ಜತೆಗೆ ಈ ಬ್ಯಾಂಕ್ಗಳಲ್ಲಿ ಸಹಕಾರಿಗಳು ಯಶಸ್ವಿನಿ ಕಾರ್ಡ್ ಮಾಡಿಸಲು ಕೂಡ ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಆದರೆ ಸರಕಾರ ಎರಡೂವರೆ ವರ್ಷಗಳಿಂದ ಹೊಸದಾಗಿ ಕಾರ್ಡ್ಗಳನ್ನು ಮಾಡಿಸಲು ಅವಕಾಶವೇ ನೀಡಿಲ್ಲ. ಹಲವು ಪ್ರಕರಣಗಳಲ್ಲಿ ಪಡಿತರ ಪಡೆಯದ ಲಕ್ಷಾಂತರ ಎಪಿಎಲ್ ಕಾರ್ಡ್ಗಳನ್ನು ನಿಷ್ಕಿ್ರಯಗೊಳಿಸಲಾಗಿದೆ
. ರಾಜ್ಯದಲ್ಲಿ ಪ್ರಸ್ತುತ 29.69 ಲಕ್ಷಕ್ಕೂ ಹೆಚ್ಚು ಎಪಿಎಲ್ ಕಾರ್ಡ್ಗಳಿವೆ. ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ’ ಎಪಿಎಲ್ ಹೊಂದಿರುವ ಪ್ರತಿ ಕಾರ್ಡ್ಗೆ ಕೆಜಿ ಅಕ್ಕಿಗೆ 15 ರೂ.ನಂತೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಡಿತರ ಪಡೆಯದ ಕಾರ್ಡ್ಗಳಿಗೆ ಪಡಿತರ ನಿಲ್ಲಿಸಲು ಆಹಾರ ಇಲಾಖೆ ಹಿಂದೆಯೇ ನಿರ್ಧಾರ ತೆಗೆದುಕೊಂಡಿದೆ. ಹಾಗಾಗಿ, ಪಧಿಡಿಧಿತಧಿರ ಪಡೆಯದ ಕಾರ್ಡ್ಗಳನ್ನು ಡಿಲೀಟ್ ಮಾಡಲಾಗಿದೆ. ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಇಲಾಖೆಯು ಎಪಿಎಲ್ ಕಾರ್ಡ್ ನೀಡುತ್ತಿತ್ತು. ಇದೀಗ ಮೂರು ವರ್ಷಗಳಿಂದ ಹೊಸ ಎಪಿಎಲ್ ಕಾರ್ಡ್ ನೀಡುವುದನ್ನೂ ಇಲಾಖೆ ನಿಲ್ಲಿಸಿದೆ








