ಕಡಬ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪೇಟೆಯಲ್ಲಿ ಮತ ಯಾಚನೆ

(ನ್ಯೂಸ್ ಕಡಬ) newskadaba.com ಕಡಬ, ಮೇ.08. ಕಾಂಗ್ರೆಸ್ ಪಕ್ಷವು ಕಳೆದ 70 ವರ್ಷಗಳಿಂದ ಅಲ್ಪಸಂಖ್ಯಾತರನ್ನು ಭಯದಲ್ಲಿರಿಸಿ ಮತ ಬ್ಯಾಂಕ್ ಆಗಿ ಬಳಸಿಕೊಂಡದ್ದು ಬಿಟ್ಟರೆ ಅಲ್ಪಸಂಖ್ಯಾಕರ ಅಭ್ಯುದಯಕ್ಕೆ ಯಾವುದೇ ರಚನಾತ್ಮಕ ಕೆಲಸ ಮಾಡಿಲ್ಲ. ಅಲ್ಪಸಂಖ್ಯಾಕ ಮತದಾರರು ಕಾಂಗ್ರೆಸ್ ಪಕ್ಷದ ಅಧೀನದಲ್ಲ್ಲಿಲ್ಲ ಎನ್ನುವುದು ಕಾಂಗ್ರೆಸ್ ನಾಯಕರಿಗೆ ತಿಳಿದಿರಲಿ ಎಂದು ಬಿಜೆಪಿ ಅಲ್ಪ ಸಂಖ್ಯಾತ ಮುಖಂಡ ಡಾ|ಅನಿಲ್ ಈಶೋ ಹೇಳಿದರು.

ಅವರು ಮಂಗಳವಾರದಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಕಡಬ ಪೇಟೆಯಲ್ಲಿ ಮತಯಾಚನೆ ಕಾರ್ಯಕ್ರಮಕ್ಕೆ ಮೊದಲು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಜರಗಿದ ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಿಜೆಪಿಯ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ಭಯಪಡಿಸಿದ್ದನ್ನು ಬಿಟ್ಟರೆ ಕಾಂಗ್ರೆಸ್ ಯಾವತ್ತೂ ಕೂಡ ಅಲ್ಪಸಂಖ್ಯಾತರನ್ನು ಅಭಿವೃದ್ಧಿಯಾಗಲು ಬಿಟ್ಟಿಲ್ಲ. ಅಲ್ಪಸಂಖ್ಯಾಕರನ್ನು ತುಷ್ಟೀಕರಣ ಮಾಡಿ ತನ್ನ ಮತ ಬ್ಯಾಂಕ್ ಆಗಿ ಇರಿಸಿಕೊಳ್ಳುವುದಲ್ಲಿಯೇ ತಲ್ಲೀನವಾಗಿದ್ದ ಕಾಂಗ್ರೆಸ್‌ನ ಸಂಚನ್ನು ಅರಿತಿರುವ ಕ್ರೈಸ್ತರು ಹಾಗೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅಶ್ರಫ್ ಕಾಸಿಲೆ, ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ, ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಕಷ್ಣ ಶೆಟ್ಟಿ ಕಡಬ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಮಾತನಾಡಿದರು. ಕಡಬ ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಮುಖ್ ಎ.ಬಿ.ಮನೋಹರ ರೈ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಮಾಜಿ ಅಧ್ಯಕ್ಷ ಸತೀಶ್ ನಾಯಕ್, ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಕುಂಞಿ ನೇಲಡ್ಕ, ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರಾದ ಡಾ|ಬೇಬಿ ಮ್ಯಾಥ್ಯೂ ಕಲ್ಲುಗುಡ್ಡೆ, ಮಾಣಿ ಪದಿಯೋಟ್ಟಿಲ್, ಜೋಸೆಫ್ ಚೆರಿಯನ್ ನೆಟ್ಟಣ, ಸಜಿ ಲೂಕೋಸ್ ನೆಟ್ಟಣ, ಪಿ.ಪಿ.ಥಾಮಸ್ ನೆಟ್ಟಣ, ಆದಂ ಕುಂಡೋಳಿ, ದಾವೂದ್ ಕಲ್ಲುಗುಡ್ಡೆ, ರಜಾಕ್ ಉಜಿರುಪಾದೆ, ಮಹಮ್ಮದ್ ರಫೀಕ್ ಉಜಿರುಪಾದೆ, ಸಿ.ಪಿ.ಜಾನ್ ಕರಿಮಾಂಗಲ್, ಸಿ.ವಿ.ರಾಜು ಕುಟ್ರುಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

Also Read  KMS Activator Software ➔ Activate your Software Program Now!

ಬಿಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾಕ ಮೋರ್ಚಾದ ಕಾರ್ಯದರ್ಶಿ ಫಯಾಝ್ ಕಡಬ ಸ್ವಾಗತಿಸಿ, ನಿರೂಪಿಸಿದರು. ಅಂಜೇರಿ ಜೋಸ್ ವಂದಿಸಿದರು.

error: Content is protected !!
Scroll to Top