ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ರವರಿಂದ ಕಳಾರ ಸರಕಾರಿ ಶಾಲಾ ಎಲ್ ಕೆ. ಜಿ. ಮತ್ತು ಯು.ಕೆ.ಜಿ ಕೋಠಡಿ ಉದ್ಘಾಟನೆ.



(ನ್ಯೂಸ್‌ ಕಡಬ) newskadaba.com,ಜ.27: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಕಳಾರ ಇದರ ಪೂರ್ವ ಪ್ರಾಥಮಿಕ( ಎಲ್. ಕೆ. ಜಿ. ಮತ್ತು ಯು. ಕೆ. ಜಿ) ಸ್ಮಾರ್ಟ್ (ತಂತ್ರಜ್ಞಾನ ಆಧಾರಿತ) ತರಗತಿ ಉದ್ಘಾಟನಾ ಸಮಾರಂಭವು ಜರಗಿತು.





ನೂತನ ಕೋಠಡಿ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತರಾದ ಶ್ರೀ ಹರೆಕಳ ಹಾಜಬ್ಬನವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀ ಕೆ. ಎಚ್.ಹಂಝ ಕಳಾರ ವಹಿಸಿದರು. ನೆರೆದಿರುವ ಎಲ್ಲ ಗಣ್ಯರು ಮತ್ತು  ಸಭೀಕರನ್ನು ಪ್ರಭಾರ ಮುಖ್ಯೋಪಾಧ್ಯಾಯರಾದ ಹಾಲೇಶ್ ನಾಯ್ಕ್. ಜಿ ಇವರು ಸ್ವಾಗತಿಸಿದರು,ಸಭಾ ಕಾರ್ಯಕ್ರಮಯದ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಕಡಬ ಇದರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹನೀಫ್ ಹಾಜಿ ಕೆ.ಎಂ ನೆರವೇರಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತರಾದ  ಶ್ರೀ ಹರೆಕಳ ಹಾಜಬ್ಬ ರವರನ್ನು ನಾಮ ಪಾಲಕ ಮತ್ತು ಶಾಲು ಹಾಕುವುದರ ಮೂಲಕ  ಗೌರವಿಸಲಾಯಿತು.






 

ಗೌರವವನ್ನು ಸ್ವೀಕರಿಸಿದ ನಂತರ ಮಾತನಾಡಿದ ಪದ್ಮಶ್ರೀ ಪುರಸ್ಕೃತರು ಎಸ್ ಡಿ ಎಂ ಸಿ ಸಮಿತಿಯ ಮೂಲಕ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಾರಂಭವಾಗಿರುವ ಪೂರ್ವ ಪ್ರಾಥಮಿಕ ತರಗತಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸಮಸ್ತ ಗ್ರಾಮಸ್ಥರು ಹಾಗೂ ಎಲ್ಲ ಜನಪ್ರತಿನಿಧಿನಗಳು ಸರಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಮೂಲಕ ಕಳಾರ ಶಾಲೆಯ ಈ ಪೂರ್ವ ಪ್ರಾಥಮಿಕ ತರಗತಿಗಳನ್ನು ಬೆಂಬಲಿಸುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ತಮ್ಮಿಂದ ಆಗಬೇಕು ಎಂದು ಹೇಳಿದರು. ಸಾಮಾನ್ಯ ತರಗತಿಯನ್ನು ಸುಂದರ ಹಸ್ತಾಕ್ಷರದ ಮೂಲಕ ಸ್ಮಾರ್ಟ್ ತರಗಯಾಗಿ ಪರಿವರ್ತಿಸಿದ ಶ್ರೀ ಅನಿಲ್ ಕೆ. ವಿ ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

 

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀ ಸೈಮನ್ ಸಿ ಕೆ, ಶ್ರೀಮತಿ ಅಕ್ಷತಾ, ಶ್ರೀ ರೋಹಿತ್ ಗೌಡ,ದಯಾನಂದ ಪಿಜಕಳ, ಫೈಝಲ್ ಎಸ್ ಇ ಎಸ್, ಶ್ರೀ ಮೋಹನ್, ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಹಾಜಿ ಮೀರಾನ್ ಸಾಹೇಬ್, ಸ್ಥಳೀಯ ಮೊಹಮ್ಮದಿಯಾ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಸಮದ್ ಬಾಕವಿ, ಕಳಾರ ಜಮಾತ್ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಹಾಜಿ, ಕೆಡಿಪಿ ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಮಾಜಿ ಸದಸ್ಯರಾದ ಶಾಲಿನಿ ಸತೀಶ್ ನಾಯ್ಕ್, ಮೇಲಿನ ಮನೆ ಸತೀಶ್ ನಾಯ್ಕ್, ಕಡಬ ಗಸ್ತು ಅರಣ್ಯ ಅಧಿಕಾರಿಯಾದ ಚಿದಾನಂದ.ಬಿ, ರಾಘವೇಂದ್ರ ಮತ್ತು ಶುಶಾಂತ್ ಆಚಾರ್ಯ,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡ್ಡಗದ್ದೆ ಒಕ್ಕೂಟದ ಸೇವಾಪ್ರತಿನಿಧಿಯಾದ  ಶ್ರೀಮತಿ ನಳಿನಿ, ಸವಿತಾ, ಹಿರಿಯರಾದ ಯೂಸುಫ್ ಕಳಾರ, ಅಬ್ಬಾಸ್ ಹಾಜಿ ಕಳಾರ,ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ್ ಅಲಿ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ, ರಮ್ಲ ಸನ್ ರೈಸ್, ಇಸ್ಮಾಯಿಲ್ ಬಿಡಿಎಸ್, ಇಸ್ಮಾಯಿಲ್ ಕೆ ಎಚ್ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸಂಶೀರಾ ಬಾನು, ಸದಸ್ಯರಾದ ಹಾರಿಸ್ ಕಳಾರ, ಜಬ್ಬರ್ ಕಳಾರ, ಶರೀಫ್ ಬಿಡಿಎಸ್ ಸಾಜಿದ ಕಳಾರ ಸೇರಿದಂತೆ ಸರ್ವ ಸದಸ್ಯರು ಹಾಗೂ ಪೋಷಕರು, ಪೂರ್ವ ವಿದ್ಯಾರ್ಥಿ ಸಂಘದ ನಾಯಕರಾದ ಇಕ್ಬಾಲ್ I A S ಸೇರಿದಂತೆ ಸರ್ವ ಸದಸ್ಯರು, ವಿದ್ಯಾಭಿಮಾನಿಗಳು, ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು. ಈ ಸಂದರ್ಭದಲ್ಲಿ ಹಲವು ಗಣ್ಯರನ್ನು ನೆನಪಿನ ಕಾಣಿಕೆಯ ಮೂಲಕ ಗೌರವಿಸಲಾಯಿತು.ಅತಿಥಿ ಶಿಕ್ಷಕಿಯರಾದ ಶ್ರೀಮತಿ ಆಬಿದ, ನವ್ಯಶ್ರೀ ಜಯಶ್ರೀ ಇವರುಗಳು ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಅಶ್ವಿನಿ ಇವರು ಧನ್ಯವಾದ ಅರ್ಪಿಸಿದರು…

error: Content is protected !!
Scroll to Top