(ನ್ಯೂಸ್ ಕಡಬ) newskadaba.com,ಜ.22 ಮಂಗಳೂರು: ಮಂಗಳೂರು- ಕಾಸರಗೋಡು ಮಾರ್ಗದ ಕುಂಬಳೆಯಲ್ಲಿ ಅಧಿಕೃತ ಟೋಲ್ ವಸೂಲಿ ಪ್ರಾರಂಭವಾಗುವ ಮುನ್ನವೇ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿದೆ.
ಮಂಗಳವಾರ ಬೆಳಗ್ಗಿನಿಂದ ಟೋಲ್ ದರ ಒಳಗೊಂಡ ಪರಿಷ್ಕೃತ ಅಧಿಕ ದರ ವಸೂಲಿ ಬಸ್ ಗಳಲ್ಲಿ ಆರಂಭವಾಗಿದೆ. ಇದೇ ವೇಳೆ ಕೇರಳ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಟಿಕೆಟ್ ದರ ಹೆಚ್ಚಳಗೊಂಡಿಲ್ಲ.
ಕುಂಬಳೆಯಿಂದ ಮಂಗಳೂರಿಗೆ 67 ರು. ಇದ್ದದ್ದು ಇದೀಗ 75 ರು. ಆಗಿದ್ದು, ರಾಜ ಹಂಸ ಸಾರಿಗೆಗೆ 80 ರು. ಇದ್ದುದನ್ನು 10 ರು. ದರ ಏರಿಸಿ 90 ರು. ವಸೂಲಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ಬಸ್ ಟಿಕೆಟಿಗೆ 7 ರು. ಹೆಚ್ಚಳಗೊಳಿಸಿದ್ದು ಮಂಗಳವಾರದಿಂದಲೇ ವಸೂಲಿ ಆರಂಭಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.








