ಮರ್ಧಾಳ: ರಸ್ತೆ ಬಿಟ್ಟು ಕಮರಿಗೆ ಉರುಳಿದ ಕಾರು



(ನ್ಯೂಸ್ ಕಡಬ) newskadaba.com ಕಡಬ, ಮೇ‌.06. ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಬಿದ್ದು, ರಬ್ಬರ್ ಮರಕ್ಕೆ ವಾಲಿ ನಿಂತ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಚಾಕೋಟೆಕರೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.







ಕುಟ್ರುಪ್ಪಾಡಿಯ ಸಿಜು ಎಂಬವರಿಗೆ ಸೇರಿದ ಮಾರುತಿ ಡಿಝೈರ್ ಕಾರು ಇಚಿಲಂಪಾಡಿ ಕಡೆಯಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದಾಗ ಚಾಕೋಟೆಕರೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದೆ. ಘಟನೆಯಲ್ಲಿ ಕಾರು ಚಾಲಕ ಸಿಜು ಹಾಗೂ ಪ್ರಯಾಣಿಕರೋರ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.






error: Content is protected !!
Scroll to Top