(ನ್ಯೂಸ್ ಕಡಬ) newskadaba.com,ಡಿ.30 ಬೆಂಗಳೂರು: ರಾಜ್ಯದಲ್ಲಿರುವ ಸಮುದಾಯದ ಶ್ರಮಿಕರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಮನೆಗಳನ್ನು ಒದಗಿಸಲು ಮುಂದಾಗಿರುವ ಕರ್ನಾಟಕ ಗೃಹ ಮಂಡಳಿ, ರಾಜ್ಯಾದ್ಯಂತ ಒಂದು ಲಕ್ಷ ನಿವೇಶನಗಳು ಹಾಗೂ ಹತ್ತು ಸಾವಿರ ಮನೆಗಳನ್ನು ನೀಡುವ ಮಹತ್ವದ ಯೋಜನೆ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ರಾಜ್ಯದ ಪ್ರಗತಿ ಹಾಗೂ ನಗರೀಕರಣದ ಹಿನ್ನೆಲೆಯಲ್ಲಿ ವಸತಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆ ನೀಗಿಸುವ ನಿಟ್ಟಿನಲ್ಲಿ ಸರಕಾರ ಹಲವು ವಸತಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ನಡುವೆ ಗೃಹ ಮಂಡಳಿ ಕೂಡ ‘ಸಮುದಾಯದ ಶ್ರಮಿಕರಿಗೆ (ಕಮ್ಯುನಿಟಿ ವರ್ಕರ್ಸ್) ಮುಖ್ಯಮಂತ್ರಿಗಳ ‘ನಮ್ಮ ಮನೆ’ ಯೋಜನೆ ‘ಯಡಿ ರಾಜ್ಯಾದ್ಯಂತ ನಿವೇಶನ ಹಾಗೂ ಮನೆಗಳನ್ನು ಕಲ್ಪಿಸಲು ಸುಮಾರು 8,778.50 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದೆ.
ಸ್ವಂತ ಅನುದಾನದಲ್ಲಿ ಯೋಜನೆ:
ಈ ಯೋಜನೆಯಡಿ ಅವಶ್ಯಕವಿರುವ ಜಮೀನನ್ನು ಭೂಸ್ವಾಧೀನ ಮತ್ತು ಅನುಪಾತದ ಪಾಲುದಾರಿಕೆಯಡಿ ಮತ್ತು ಜಂಟಿ ಸಹಭಾಗಿತ್ವದಲ್ಲಿ ಪಡೆಯಲು ಮಂಡಳಿ ನಿರ್ಧರಿಸಿದೆ. ಯೋಜನೆ ಅನುಷ್ಠಾನಕ್ಕೆ ಅಗಧಿತ್ಯವಿರುವ ಅನುದಾನವನ್ನು ಮಂಡಳಿಯ ಸ್ವಂತ ಸಂಪನ್ಮೂಲದಿಂದಲೇ ಭರಿಸಲು ನಿರ್ಧರಿಸಿದೆ..
ಯೋಜನೆ ವಿವರ
ನಿವೇಶನ: 1 ಲಕ್ಷ
ಜಮೀನಿನ ಒಟ್ಟು ಮೊತ್ತ (3,302 ಎಕರೆ): 3,136.90 ಕೋಟಿ ರೂ.
ಅಭಿವೃದ್ಧಿ ವೆಚ್ಚ: 2,641.60 ಕೋಟಿ ರೂ.
ಒಟ್ಟು ಯೋಜನಾ ಮೊತ್ತ: 5,778.50 ಕೋಟಿ ರೂ.
10 ಸಾವಿರ ಫ್ಲ್ಯಾಟ್‌ಗಳ ಯೋಜನೆ: 3,000 ಕೋಟಿ ರೂ.
ಒಟ್ಟಾರೆ ಯೋಜನೆಯ ಮೊತ್ತ: 8,778.50 ಕೋಟಿ ರೂ.












