ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಪಥ ಸಮಾರೋಪ



(ನ್ಯೂಸ್‌ ಕಡಬ) newskadaba.com,ಡಿ.29:  ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಣ ಮಕ್ಕಳಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತವೆ. ಅಂದಿನ ದಿನ ಈ ಶಾಲೆಯ ನಿರ್ಮಾಣದಲ್ಲಿ ಅನೇಕರ ಬೆವರ ಹನಿಯಿದೆ. ಇಲ್ಲಿ ಕಲಿತವರು ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ್ದಾರೆ. ಅನೇಕ ಉನ್ನತ ಉದ್ಯೋಗ, ಹುದ್ದೆಗಳಲ್ಲಿದ್ದಾರೆ. ಅದ್ಭುತ ಪಥ ಅಭಿವೃದ್ಧಿ ಪಥವಾಗಲಿ ಎಂದು ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಬ್ರಾಯ ಚೊಕ್ಕಾಡಿ ಹೇಳಿದರು.





ಅವರು ಡಿ.28 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಪತ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿ ಅಂದಿನ ಕಷ್ಟಕರ ದಿನಗಳಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸುವಲ್ಲಿ ಹಿರಿಯರು ಬಹಳಷ್ಟು ಶ್ರಮಿಸಿದ್ದಾರೆ. ಉತ್ತಮ ಶಿಕ್ಷಣ ಸಂಸ್ಥೆಗಳು ಇದ್ದಾಗ ಊರಿನ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ. ಟೀಮ್ ಅಧ್ಯಕ್ಷ ಡಾ.ರೇಣುಕಾ ಪ್ರಸಾ‌ದ್ ಕೆ.ವಿ.ಮಾತನಾಡಿ ದೇವರ ನಾಡಿನ ಮಧ್ಯೆ ಪಂಜದ ಪವಿತ್ರ ಶಿಕ್ಷಣ ಸಂಸ್ಥೆಯಿದೆ. ಗುರು ಶಿಷ್ಯ ಸಂಬಂಧಗಳು ಮುಂದುವರಿಯಬೇಕು ಎಂದು ಹೇಳಿದರು….






ಇನ್ನೋರ್ವ ಮುಖ್ಯ ಅತಿಥಿಯಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪರಾಚೆ ಪಾಲ್ಗೊಂಡಿದ್ದರು ಅಮೃತ ಪಥ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಮೃತ ಪರ ಸಮಿತಿ ಪ್ರಧಾನ ಕಾರ್ಯದರ್ಶಿ ಸವಿತಾರ ಮುಡೂರು, ಪ್ರಧಾನ ಸಂಚಾಲಕ ಚಿನ್ನಪ್ಪ ಸಂಕಷ್ಟ, ಕಾರ್ಯದರ್ಶಿ ಗುರು ಪ್ರಸಾದ್ ತೋಟ, ಖಜಾಂಜಿ ಜಯರಾಮ ಕಂಬಳ, ಸಾಲಾ ಮುಖ್ಯೋಪಾಧ್ಯಾಯ ದೇವಿ ಪ್ರಸಾದ್ -ಪ್ರಾಯುವಾ ಚಿದಾನಂದ ಕೆ. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಸುಚಿನ್ನ ಕಾಣಿಕೆ, ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ವೇದಿಕೆಯಲ್ಲಿ ಉಪಸ್ಥಿತನಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ, ರಮ್ಯ, ಕಾವ್ಯಶ್ರೀ, ಸವಿತಾ, ಯಕ್ಷಿತಾ ಪ್ರಾರ್ಥಿಸಿದರು. ಪ್ರಾಂಶುಪಾಲ ಚವಾನಂದ ಕೆ ಸ್ವಾಗತಿಸಿದರು. ಶಶಿಧರ ಪಳಂಗಾಯ ನಿರೂಪಿಸಿದರು. ಪ್ರಧಾನ ಸಂಚಾಲಕ ಚಿನ್ನಪ್ಪ ಸಂಕಷ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ದೇವಿಪ್ರಸಾದ್ ಎ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಅ.1.30 ರಿಂದ 2.30 ತನಕ ಸಾಂಸ್ಕೃತಿಕ ವೈಭವ ಪ್ರಸ್ತುತಿ ವಿದ್ಯಾರ್ಥಿ ವೃಂದ ಸರಕಾರಿ ಪ.ಪೂ.ಕಾಲೇಜು ಪಂಜ, ಆ.2.100ಂದ 4.00 ತನಕ ಯಕ್ತ ಗಾನ ವೈಭವ ಹಿಮ್ಮೇಳದಲ್ಲಿ ಸುಲಾಷ್ ಪಂಜ. ಪ್ರಶಾಂತ್ ರೈ ಪರೋಡಿ, ಭವ್ಯಶ್ರೀ ಕುಲ್ಕುಂದ, ರಚನಾ ಚಿಡ್ಕಲ್, ಕುಮಾರ 0, 1.00 coc ಸಾಂಸ್ಕೃತಿಕ ವೈವಿಧ್ಯ ಪ್ರಸ್ತುತಿ ರಾಷ್ಟ್ರ ಪ್ರಶಸ್ತಿ ವಿಜೇತ ವಿಧುಷಿ ಜ್ಞಾನ ಐತಾಳ್ ಹೆಚ್ಚಿನಾದ ತಂಡ ಮಂಗಳೂರು ರಾತ್ರಿ 9.00ರಿಂದ11 ರ ತನಕ ಹಳೆ ವಿದ್ಯಾರ್ಥಿಗಳ ಒಗ್ಗೂಡುವಿಕೆಯಿಂದ ಮೊಟ್ಟೆ ಸಂಗ್ರಾಮ ಯಕ್ಷಗಾನ ನಡೆಯಲಿದೆ.

error: Content is protected !!
Scroll to Top