(ನ್ಯೂಸ್ ಕಡಬ) newskadaba.com, ಡಿ.03: ಬೆಂಗಳೂರು: ಕರ್ನಾಟಕದ ಅನ್ನದಾತ ರೈತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಯೋಜನೆಯನ್ನು ಜಾರಿಗೆ ತಂದಿದೆ.ನೀವು ರೈತರ ಮಕ್ಕಳಾಗಿದ್ದರೆ ಮತ್ತು 8ನೇ ತರಗತಿಯಿಂದ ಡಿಗ್ರಿ/ಪಿಜಿ ವರೆಗೆ ಓದುತ್ತಿದ್ದರೆ, ನಿಮಗೆ ಸರ್ಕಾರದಿಂದ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರುತ್ತದೆ.
ಅರ್ಹತೆಗಳು
- RTC/Pahani ಕಡ್ಡಾಯ ಅಥವಾ ರೈತ ಕಾರ್ಮಿಕರ ಮಕ್ಕಳಾಗಿರಬೇಕು.
- ಬೇರೆ ಯಾವುದೇ ಸ್ಕಾಲರ್ಶಿಪ್ ಪಡೆದಿದ್ದರೂ (SSP/NSP), ಇದು ಹೆಚ್ಚುವರಿಯಾಗಿ ಸಿಗುತ್ತದೆ!
ಅರ್ಜಿ ಸಲ್ಲಿಸುವುದು ಹೇಗೆ?
- ನೀವು ಸಮಾಜ ಕಲ್ಯಾಣ ಇಲಾಖೆಯ SSP (State Scholarship Portal) ಮೂಲಕವೇ ಇದಕ್ಕೆ ಅರ್ಜಿ ಸಲ್ಲಿಸಬೇಕು.
- ಲಾಗಿನ್ ಆದಾಗ “Weaving/Farmer ID” ಕೇಳುವ ಬಾಕ್ಸ್ನಲ್ಲಿ ನಿಮ್ಮ ತಂದೆಯ ರೈತ ಐಡಿ (FID) ಹಾಕಿದರೆ ಸಾಕು. ಹಣ ತನ್ನಷ್ಟಕ್ಕೆ ಬರುತ್ತದೆ.
ವಿದ್ಯಾರ್ಥಿಗಳೇ, ನೀವು ಕರ್ನಾಟಕದಲ್ಲಿ ಓದುತ್ತಿದ್ದರೆ SSP ಕಡ್ಡಾಯವಾಗಿ ಹಾಕಿ (ಏಕೆಂದರೆ ಇದು ನಿಮ್ಮ ಕಾಲೇಜು ಫೀಸ್ ಕಡಿಮೆ ಮಾಡುತ್ತದೆ). ಜೊತೆಗೆ, ನಿಮ್ಮ ಅದೃಷ್ಟ ಪರೀಕ್ಷಿಸಲು NSP ಗೂ ಅರ್ಜಿ ಹಾಕಿ. ಎರಡರಲ್ಲಿ ಒಂದು ಗ್ಯಾರಂಟಿ ಸಿಗುತ್ತದೆ…













