ಮಂಗಳೂರು : ರಾಜ್ಯ ಸ್ಪೀಡ್ ಸ್ಕೇಟಿಂಗ್ – ಯುವರಾಜ್, ತಸ್ಮಯಿಗೆ ಚಿನ್ನ



(ನ್ಯೂಸ್‌ ಕಡಬ) newskadaba.com,  ನ.24 :  ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 41ನೇ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ನಗರದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳ ಮಳೆ ಸುರಿಸಿದ್ದಾರೆ. ಕರ್ನಾಟಕ ರಾಜ್ಯ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಯ್ಕೆಯಾದ 400ಕ್ಕೂ ಅಧಿಕ ಸ್ಕೇಟಿಂಗ್ ಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.





ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟಿಂಗ್ ಪಟುಗಳಾದ ಯುವರಾಜ್ ಕುಂದರ್ 2 ಚಿನ್ನದ ಪದಕ ಗೆದ್ದುಕೊಂಡರೆ, ತಸ್ಮಯಿ ಶೆಟ್ಟಿ 1ಚಿನ್ನ, 1ಬೆಳ್ಳಿ ಮತ್ತು 1ಕಂಚು, ಹಾನಾ ರೋಸ್ 3 ಬೆಳ್ಳಿ, ಕೃತಿ ಐತಾಲ್ 2ಬೆಳ್ಳಿ ಮತ್ತು 1 ಕಂಚು, ಐಶಾನಿ ಸಂತೋಷ್ 2 ಬೆಳ್ಳಿ, ಗ್ಲಾನಿಯ ಲೋಬೋ 1 ಬೆಳ್ಳಿ, ಶ್ರೇಷ್ಠ ಶೆಣೈ 3 ಕಂಚು, ನಿರ್ಮಯಿ ವೈ ಎನ್ 2 ಕಂಚು ಹಾಗೂ ಧೃತಿ ಅಮಿನ್ 1 ಕಂಚಿನ ಪದಕವನ್ನು ಗೆದ್ದುಕೋಡಿದ್ದಾರೆ .






ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ಪಟುಗಳು ಕಠಿಣ ಸ್ಪರ್ಧೆಯ ನಡುವೆಯೂ ಒಟ್ಟು 17 ಪದಕಗಳನ್ನು ತಮ್ಮದಾಗಿಸಿಕೊಂಡು ನಗರಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಈ ಯುವ ಪ್ರತಿಭೆಗಳು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ತರಬೇತುದಾರರಾದ ಮಹೇಶ್ ಕುಮಾರ್ ಮತ್ತು ಶ್ರವಣ್ ಅವರ ಮಾರ್ಗದರ್ಶನದಲ್ಲಿ ತಯಾರಿ ಪಡೆದು, ರಾಜ್ಯ ಮಟ್ಟದ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

error: Content is protected !!
Scroll to Top