(ನ್ಯೂಸ್ ಕಡಬ) newskadaba.com ಪುತ್ತೂರು, ಜು.06. ರಸ್ತೆಯಲ್ಲಿ ತನಗೆ ಬಿದ್ದು ಸಿಕ್ಕಿದ 40900 ರೂಪಾಯಿ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಘಟನೆ ಪುತ್ತೂರಿನಲ್ಲಿ ಗುರುವಾರದಂದು ನಡೆದಿದೆ.
ಪುತ್ತೂರು ತಾಲೂಕಿನ ಕಾವು ನಿವಾಸಿಗಳಾದ ಆನಂದ ಮೂಲ್ಯ ಹಾಗೂ ಕೋಟಿ ಮೂಲ್ಯ ಎಂಬವರಿಗೆ ಬಿದ್ದು ಸಿಕ್ಕಿತೆನ್ನಲಾದ ಹಣವನ್ನು ಇನ್ನೊಬ್ಬರಿಗೆ ಸೇರಬೇಕಾದ ವಸ್ತು ತನಗೆ ಬೇಡವೆನ್ನುವ ಇರಾದೆಯೊಂದಿಗೆ ಪುತ್ತೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆನಂದ ಮೂಲ್ಯರು ಕಾವು ಮಾಡ್ನೂರು ಗ್ರಾಮದ ಮದ್ಲ ನಿವಾಸಿಯಾಗಿದ್ದು, ಮದ್ಲದಲ್ಲಿ ಗೂಡಂಗಡಿಯಲ್ಲಿ ಜಿನಸು ವ್ಯಾಪಾರ ಮಾಡುತ್ತಿದ್ದಾರೆ. ಸಮಾಜ ಸೇವೆಯಲ್ಲೂ ಸಕ್ರಿಯರಾಗಿರುವ ಆನಂದ ಮೂಲ್ಯರು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ಗೌರವ ಸಲಹೆಗಾರರಾಗಿದ್ದಾರೆ.