(ನ್ಯೂಸ್ ಕಡಬ) newskadaba.com, ನ.20 ನವದೆಹಲಿ: 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಬಾಲಕ ತನ್ನ ಶಿಕ್ಷಕರನ್ನು ದೂಷಿಸಿ ಆತ್ಮಹತ್ಯೆ ಪತ್ರ ಬರೆದಿದ್ದಾನೆ. ಈ ಸಂಬಂಧ 16 ವರ್ಷದ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಮೂವರು ಶಿಕ್ಷಕರು ಮತ್ತು ಶಾಲೆಯ ಪ್ರಾಂಶುಪಾಲರು ತನ್ನ ಮಗನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೋವಿನಿಂದ ಹೇಳಿದ್ದಾರೆ.ದೆಹಲಿಯ ಪ್ರಮುಖ ಶಾಲೆಯೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕ ತನ್ನ ಆತ್ಮಹತ್ಯೆ ಪತ್ರದಲ್ಲಿ, ಕ್ಷಮಿಸಿ ಅಮ್ಮ, ನಾನು ನಿಮ್ಮ ಹೃದಯವನ್ನು ಹಲವು ಬಾರಿ ಮುರಿದಿದ್ದೇನೆ..
ಹದಿಹರೆಯದ ಬಾಲಕನ ತಂದೆ ತನ್ನ ಮಗ ಮಂಗಳವಾರ ಬೆಳಿಗ್ಗೆ 7.15 ಕ್ಕೆ ಶಾಲೆಗೆ ಹೋಗಿದ್ದ ಎಂದು ಹೇಳಿದ್ದಾರೆ. ಆದರೆ, ಮಧ್ಯ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಬಳಿ 16 ವರ್ಷದ ಬಾಲಕ ಗಾಯಗೊಂಡು ಬಿದ್ದಿದ್ದಾನೆ ಎಂದು ಮಧ್ಯಾಹ್ನ 2.45 ರ ಸುಮಾರಿಗೆ ತಂದೆಗೆ ಕರೆ ಬಂದಿತು. ಮತ್ತೊಬ್ಬ ಶಿಕ್ಷಕ ಒಮ್ಮೆ ತನ್ನ ಮಗನನ್ನು ತಳ್ಳಿದ್ದ ಎಂದು ತಂದೆ ಆರೋಪಿಸಿದ್ದಾರೆ. ಮಂಗಳವಾರದಂದು ತರಗತಿಯಲ್ಲಿ ಬಾಲಕ ಬಿದ್ದಾಗ ಒಬ್ಬ ಶಿಕ್ಷಕ ಅವನನ್ನು ಅವಮಾನಿಸಿ, ಅತಿಯಾಗಿ ನಟಿಸುತ್ತಿದ್ದಾನೆ ಎಂದು ಅಪಹಾಸ್ಯ ಮಾಡಿದರಂತೆ.
ಬಳಿಕ ಅವನನ್ನು ತುಂಬಾ ಗದರಿಸಲಾಯಿತು ಎಂದು ಆರೋಪಿಸಲಾಗಿದೆ. ಅವನು ಅಳಲು ಪ್ರಾರಂಭಿಸಿದ್ದಕ್ಕೆ ಎಷ್ಟು ಬೇಕಾದರೂ ಅಳಬಹುದು ಎಂದು ಶಿಕ್ಷಕ ವ್ಯಂಗ್ಯ ಮಾಡಿದ್ದರಂತೆ. ಇದೆಲ್ಲವೂ ನಡೆಯುತ್ತಿರುವಾಗ ಪ್ರಾಂಶುಪಾಲರು ಇದ್ದರು. ಆದರೆ ಅದನ್ನು ತಡೆಯಲು ಅವರು ಏನೂ ಮಾಡಲಿಲ್ಲ ಎಂದು ಮೃತ ಬಾಲಕನ ತಂದೆ ಆರೋಪಿಸಿದರು.
.ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರನ್ನು ಹೆಸರಿಸುತ್ತಾ, ತನ್ನ ಕೊನೆಯ ಆಸೆಯೆಂದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ. ಬೇರೆ ಯಾವ ಮಕ್ಕಳಿಗೂ ಇಂತಹ ಸ್ಥಿತಿ ಬರಬಾರದು ಎಂದು ಪತ್ರದಲ್ಲಿ ಹೇಳಿದ್ದಾನೆ. ಯಾವಾಗಲೂ ತನ್ನನ್ನು ಬೆಂಬಲಿಸಿದ್ದಕ್ಕಾಗಿ ತನ್ನ ತಾಯಿಗೆ ಧನ್ಯವಾದ ಹೇಳುತ್ತಾ, ತನ್ನ ತಂದೆ ಮತ್ತು ಸಹೋದರನಿಗಾಗಿ ಹಾಗೆಯೇ ಮಾಡುವುದನ್ನು ಮುಂದುವರಿಸಲು ಕೇಳಿಕೊಂಡಿದ್ದಾನೆ. ಆದರೆ, ಶಿಕ್ಷಕರು ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಬರೆದಿದ್ದಾನೆ………













