ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದರೂ ಕುಡಿದ ಮತ್ತಿನಲ್ಲಿ ನಿಲ್ಲಿಸದೆ ಪರಾರಿ ► ಕೊಲ್ಯ ನಿವಾಸಿಯ ವಿರುದ್ಧ ಪ್ರಕರಣ ದಾಖಲು



(ನ್ಯೂಸ್ ಕಡಬ) newskadaba.com ಸವಣೂರು, ಮೇ‌.01. ಕುಡಿದು ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಕೊಯಿಲ ನಿವಾಸಿಯೋರ್ವರ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







ಕಡಬದ ಕೊಯಿಲ ಗ್ರಾಮದ ಕೊಲ್ಯ ನಿವಾಸಿ ಪೈಂಟರ್ ವೃತ್ತಿಯ ಪ್ರಶಾಂತ್ ಸೋಮವಾರದಂದು ಪುತ್ತೂರಿನಿಂದ ಸವಣೂರು ಮಾರ್ಗವಾಗಿ ಬೊಲೆರೋ ವಾಹನದಲ್ಲಿ ಬರುತ್ತಿದ್ದಾಗ ಮುಕ್ವೆ ಸಮೀಪ ಪೊಲೀಸರು ತಪಾಸಣೆ ನಡೆಸುವುದಕ್ಕಾಗಿ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆನ್ನಲಾಗಿದೆ. ಪೊಲೀಸರ ಸೂಚನೆಯನ್ನು ಕ್ಯಾರೇ ಮಾಡದ ಪ್ರಶಾಂತ್ ನಿಲ್ಲಿಸದೆ ಚಲಾಯಿಸಿದ್ದು, ಸವಣೂರಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಕುಡಿದು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಆರೋಪದಲ್ಲಿ ಪ್ರಶಾಂತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.






error: Content is protected !!
Scroll to Top