ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 30. ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, 11.30 ಗಂಟೆಗೆ ಇಲಾಖಾ ವೆಬ್‌ಸೈಟ್ ಗಳಲ್ಲಿ ಪ್ರಕಟವಾಗಲಿದೆ.

ನಾಳೆ (ಮೇ 01) ರಂದು ಕಾಲೇಜುಗಳಲ್ಲಿ ಫಲಿತಾಂಶದ ಸಂಪೂರ್ಣ ವಿವರ ದೊರೆಯಲಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಒಟ್ಟು 6.80 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, ಉತ್ತರ ಪತ್ರಿಕೆ ಮೌಲ್ಯಮಾಪನ ಪೂರ್ಣಗೊಂಡಿದೆ. ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಿಕೊಂಡಿದ್ದು, ಫಲಿತಾಂಶವನ್ನು ತಿಳಿಯಲು ಶಿಕ್ಷಣ ಇಲಾಖೆಯ ವೆಬ್‌ಸೈಟ್ karresults.nic.in ಮತ್ತು pue.kar.nic.in ಕ್ಲಿಕ್ ಮಾಡಿ.

Also Read  ಜಾತ್ರೆಯಲ್ಲಿ ವಾಹನಗಳ ಗ್ಲಾಸ್ ಒಡೆದು ಹಾನಿ ಮಾಡಿದ ಕಿಡಿಗೇಡಿಗಳು   ➤ ಮಕ್ಕಳು ಮಹಿಳೆಯರ ಮೇಲೂ ಲಾಠಿ ಬೀಸಿದ ಪೊಲೀಸರು.!  

error: Content is protected !!