(ನ್ಯೂಸ್ ಕಡಬ) newskadaba.com, ಅ..29: ತಲಪಾಡಿ ಗ್ರಾಮದ ಕೆ.ಸಿ ರೋಡ್ ಎಂಬಲ್ಲಿನ ಮನೆಯೊಂದರ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮನೆಯಿಂದ ಸಹಸ್ರಾರು ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕಳವುಗೈದ ಘಟನೆ ವರದಿಯಾಗಿದೆ.
ಮನೆ ಮಾಲಕಿ ವಿಮಲ ಎಂಬವರು ಅ.೨೫ರಂದು ಮಧ್ಯಾಹ್ನ ೩-೦೦ ಗಂಟೆಗೆ ಮನೆಗೆ ಬೀಗ ಹಾಕಿ ಕೂಳೂರು ಪಂಜಿಮೊಗರು ಎಂಬಲ್ಲಿರುವ ಅಣ್ಣನ ಮನೆಗೆ ಹೋಗಿ, ನಂತರ ಕುಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಅ.೨೬ರಂದು ಸಂಜೆ ೭:೦೦ ಗಂಟೆಗೆ ಮನೆಗೆ ವಾಪಾಸ್ ಬಂದಾಗ ಕಳ್ಳತನ ಪ್ರಕರಣ ಬಂತು ಎನ್ನಲಾಗಿದೆ. ಮನೆಯ ಟಿ.ವಿ ಶೋಕೇಸ್‌ನ ಮೇಲಿದ್ದ ಇಟ್ಟಿದ್ದ ಪೆಟ್ಟಿಗೆ ಬೀಗವನ್ನು ಮುರಿದು, ಅದರಲ್ಲಿದ್ದ ಕಲ್ಲುರ್ಟಿ ದೈವದ ಕರಿಮಣಿ ಸರ ಮತ್ತು ಕಪಾಟಿನ ಲಾಕ್‌ನ್ನು ಮುರಿದು ಅದರಲ್ಲಿದ್ದ ರೂಪಾಯಿ ೧೦,೦೦೦ ರೂ. ನಗದನ್ನು ಕಳ್ಳರು ಕಳವು ಮಾಡಿದ್ದಾರೆ.
ಕಳವಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು ೮೦,೦೦೦ ರೂ. ಎಂದು ವಿಮಲ ಎಂಬವರು ಉಳ್ಳಾಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.








