(ನ್ಯೂಸ್ ಕಡಬ) newskadaba.com, ಅ.25 ಕೋಲಾರ : ಗಣಿತದಲ್ಲಿನ ಅಸಾಮಾನ್ಯ ಮತ್ತು ವಿಶ್ವ ದಾಖಲೆಯ ಸಾಧನೆಗಾಗಿ ಮಲೂರು ಮೂಲದ ಯುವ ಪ್ರತಿಭೆಗಳಾದ ಮಾಸ್ಟರ್ ವಿಭವಿ ಸಿ. ಗೌಡ ಮತ್ತು ಮಾಸ್ಟರ್ ಪ್ರಣವ್ ಸಿ. ಗೌಡ ಅವರಿಗೆ ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಯಿಂದ ಗೌರವಪೂರ್ವಕವಾಗಿ ’ಪ್ರಶಂಸಾ ಪತ್ರ (ಅeಡಿಣiಜಿiಛಿಚಿಣe oಜಿ ಂಠಿಠಿಡಿeಛಿiಚಿಣioಟಿ) ನೀಡಿ ಗೌರವಿಸಲಾಯಿತು.
ಪ್ರಶಂಸಾ ಪತ್ರದಲ್ಲಿನ ಉಲ್ಲೇಖ-
ಇಬ್ಬರು ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲಾಘಿಸಿರುವ ಪ್ರಶಂಸಾ ಪತ್ರದಲ್ಲಿ, “ನಿಮ್ಮ ಅಸಾಧಾರಣ ನಿರ್ಣಯ, ಅಚಲ ಸಮರ್ಪಣೆ ಮತ್ತು ಅತ್ಯುತ್ತಮ ಪ್ರತಿಭೆ ಕೇವಲ ವೈಯಕ್ತಿಕ ಉತ್ಕೃಷತೆಯನ್ನು ಪ್ರದರ್ಶಿಸುವುದಲ್ಲದೆ, ಇತರರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ.
ವಿಭವಿ ಗೌಡ ಮತ್ತು ಪ್ರಣವ್ ಸಿ. ಗೌಡ ಅವರು ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಸುಕನ್ಯಾ ಚಂದ್ರಶೇಖರ್ ಅವರ ಪುತ್ರರಾಗಿದ್ದಾರೆ. ಕೋಲಾರ ಜಿಲ್ಲೆಯ ಈ ಇಬ್ಬರು ಯುವ ಸಾಧಕರ ಸಾಧನೆಯು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಮಾಲೂರು ತಾಲ್ಲೂಕಿನ ನಾಗರಿಕರು ಈ ಯುವ ಪ್ರತಿಭೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.












