(ನ್ಯೂಸ್ ಕಡಬ) newskadaba.com, ಅ..24 : ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿ ಘಾಟ್‌ನಲ್ಲಿ ರಸ್ತೆಬದಿಯ ಹೊಳೆಗೆ ಕಾರ್ ಬಿದ್ದಿದೆ. ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನಲ್ಲಿ ಈ ಘಟನೆ ನಡೆದಿದ್ದು, 40 ಅಡಿ ಎತ್ತರದಿಂದ ಕಾರ್ ಹೊಳೆಗೆ ಇಳಿದ್ರೂ ಎಲ್ಲರೂ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ. ಕಾರಿನಲ್ಲಿ ಗೋವಿಂದ್, ಪತ್ನಿ ಆಶಾ ಮಕ್ಕಳಾದ ಹರ್ಷಿತ್, ವರ್ಷಿತ್ ನಾಲ್ವರು ಮಂಗಳೂರಿಗೆ ತೆರಳುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು – ಬೆಂಗಳೂರು ನಗರಗಳಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಶಿರಾಡಿ ಗ್ರಾಮದಲ್ಲಿನ ಮಾರ್ಗ ಅಂಕುಡೊಂಕಾಗಿದೆ. ಈ ಗ್ರಾಮವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವ್ಯಾಪ್ತಿಗೆ ಒಳಪಡುತ್ತದೆ. ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಮೂಲಕ ಹಾದುಹೋಗುತ್ತದೆ.












