(ನ್ಯೂಸ್ ಕಡಬ) newskadaba.com, ಅ.21 ಶಿರಾ: ಶಿರಾ ತಾಲೂಕಿನ ಬರಪೀಡಿತ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸಿನಿಮಾರಂಗದಲ್ಲಿ ಆಸಕ್ತಿ ಹೊಂದಿ ಏನಾದರೂ ಸಾಧಿಸಬೇಕೆಂದು ಪಣತೊಟ್ಟು ದಿಲ್‌ಮಾರ್ ಎಂಬ ಚಲನಚಿತ್ರದಲ್ಲಿ ತಾಲೂಕಿನ ಮಾನಂಗಿ ಗ್ರಾಮದ ರಾಮ್ ಗೌಡ ಅವರು ನಟಿಸಿದ್ದು, ಚಲನಚಿತ್ರವು ಅ.24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಎಲ್ಲರೂ ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ರಾಜ್ಯ ಜೆಡಿಎಸ್ ಪರಿಷತ್ ಅಧ್ಯಕ್ಷ ಆರ್.ಉಗ್ರೇಶ್ ಹೇಳಿದರು.
ಅವರು ನಗರದ ಶ್ರೀ ದುರ್ಗಮ್ಮ ದೇವಾಲಯದ ಆವರಣದಲ್ಲಿ ನಡೆದ ದಿಲ್ ಮಾರ್ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೆಜಿಎಫ್ ಚಿತ್ರಕ್ಕೆ ಸಂಭಾ ಷಣೆ ಬರೆದಿದ್ದ ಚಂದ್ರಮೌಳಿ ಅವರು ನಿರ್ದೇಶಿಸಿರುವ ದಿಲ್‌ಮಾರ್ ಚಲನಚಿತ್ರಕ್ಕೆ ರಾಮ್ ಗೌಡ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಚಲನಚಿತ್ರ ಯಶಸ್ವಿಯಾಗಿ ೧೦೦ ದಿನ ಪ್ರದರ್ಶನಗೊಳ್ಳಲಿ ಎಲ್ಲರೂ ಪ್ರೋತ್ಸಾಹ ನೀಡಿ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ ಶಿರಾ ತಾಲೂಕಿನ ಕೃಷ್ಣೇಗೌಡ ಅವರ ಸುಪುತ್ರ ರಾಮ್ ಗೌಡ ಅವರು ದಿಲ್ ಮಾರ್ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರನ್ನು ನಮ್ಮ ತಾಲೂಕಿನವರೆಲ್ಲರೂ ಪ್ರೋತ್ಸಾಹಿಸಬೇಕು. ಚಲನಚಿತ್ರವನ್ನು ಕುಟುಂಬ ಸಮೇತ ಹೋಗಿ ಚಿತ್ರ ಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕು. ಗ್ರಾಮೀಣ ಪ್ರತಿಭೆಯನ್ನು ಬೆಳೆಸಬೇಕು ಎಂದರು.












