ಶುಂಠಿ ಏರಿಕೆ ರೈತರ ಮುಖದಲ್ಲಿ ಮಂದಹಾಸ



(ನ್ಯೂಸ್ಕಡಬ) newskadaba.com,  .20 ಬೆಂಗಳೂರು: ಈ ಹಿಂದೆ ಶುಂಠಿ ಬೆಲೆ ಕುಸಿತದಿಂದಾಗಿ ಕಂಗಲಾಗಿದ್ದ ರೈತರಿಗೆ ಪ್ರಸ್ತುತ ಶುಂಠಿ ಬೆಲೆ ಏರಿಕೆಯಿಂದ ಹಿರಿ ಹಿರಿ ಹೀಗಗುವತಾಗಿದೆ. ಮುಖದಲ್ಲಿ ಮಂದಹಾಸ ಮೂಡಿದೆ. ಈಗಲೇ ಕಡಿಮೆ ದರಕ್ಕೆ ಮಾರಾಟ ಮಾಡಿದವರು ಕೈ ಕೈ ಹಿಚುಕಿಕೊಳ್ಳುತ್ತಿದ್ದಾರೆ.ಉತ್ತರಭಾರತ ರಾಜ್ಯಗಳಾದ ಧೇಲ್ಲಿ ಮಧ್ಯಪ್ರದೇಶ, ಬಾಂಬೆ ಮಾರುಕಟ್ಟೆಗಳಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಶುಂಠಿ ಬೆಲೆ ಏರಿಕೆಗೆ ಕಾರಣವಾಗಿದೆ.





ಮಲೆನಾಡು, ಅರೆಮಲೆನಾಡು ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ದೇಶದಲ್ಲಿ ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿಯೂ ಶುಂಠಿ ಬೆಳೆಯಲಾಗುತ್ತಿದೆ.ಇಡೀ ದೇಶದ ತರಕಾರಿ ಮಾರುಕಟ್ಟೆಯ ಬೇಡಿಕೆ ಕಡೆ ಗಮನ ಹರಿಸಿದರೆ ಒಂದು ದಿನಕ್ಕೆ ಸರಾಸರಿ 10 ಸಾವಿರ ಕ್ವಿಂಟಾಲ್‌ ಹಸಿ ಶುಂಠಿ ಅಗತ್ಯವಿದೆ. ಒಂದು ತಿಂಗಳಿಗೆ ಸರಾಸರಿ 3 ಲಕ್ಷ ಕ್ವಿಂಟಾಲ್‌ ಹಸಿ ಶುಂಠಿ ಮಾರಾಟವಾಗುತ್ತಿದೆ.






ಕೆಲವು ವರ್ಷಗಳ ಹಿಂದೆ ಶುಂಠಿಗೆ ಪ್ರತಿ 60 ಕೆಜಿ ಚೀಲಕ್ಕೆ 5–6 ಸಾವಿರದವರೆಗೂ ದಾಖಲೆಯ ಬೆಲೆ ಸಿಕ್ಕಿತ್ತು. ರೈತರು ಇದೇ ಹುರುಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಇದೇ ವರ್ಷ ಜನವರಿ–ಫೆಬ್ರುವರಿಯಲ್ಲಿ 1,000–1,200ಕ್ಕೆ ಧಾರಣೆ ಕುಸಿದಿತ್ತು. ಹಸಿ ಶುಂಠಿ ಗೆ ಉತ್ತಮ ಬೆಲೆ ದೊರೆತ ಹಿನ್ನೆಲೆಯಲ್ಲಿ ಶುಂಠಿ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಕಳೆದ ಬಾರಿ 60 ಕೆಜಿ ಚೀಲವೊಂದಕ್ಕೆ 6000-7000 ರು ಬೆಲೆ ದೊರೆತ ಹಿನ್ನೆಲೆಯಲ್ಲಿಈ ವರ್ಷ ಬೆಳೆಗಾರರು ಮತ್ತಷ್ಟು ಉತ್ತೇಜಿತರಾಗಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಶುಂಠಿ ಬಿತ್ತನೆಯನ್ನು ಮಾಡಲು ಮುಂದಾಗಿದ್ದರು.

 

error: Content is protected !!
Scroll to Top