ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ



(ನ್ಯೂಸ್ಕಡಬ) newskadaba.com  ಅ. 14. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಮುನ್ನೂರು ಗ್ರಾಮ ಪಂಚಾಯತ್, ಸಮರ್ಪಣಾ ಪರಿವಾರ ಟ್ರಸ್ಟ್, ಮಂಗಳೂರು ಹಾಗೂ ಜಿಲ್ಲಾ ಯುವಜನ ಒಕ್ಕೂಟ ಇದರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಅಕ್ಟೋಬರ್ 26 ರಂದು ಬೆಳಿಗ್ಗೆ 9 ಗಂಟೆಗೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಕುತ್ತಾರು ಶ್ರೀ ರಾಜರಾಜೇಶ್ವರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.





ಆಯೋಜಿಸಲಾಗುವ ಸ್ಪರ್ಧೆಗಳ ವಿವರ, ಸ್ಪರ್ಧಾ ಸಮಯ, ಸ್ಪರ್ಧಾಳುಗಳ ಸಂಖ್ಯೆ
1) ಜನಪದ ನೃತ್ಯ (ತಂಡ) – ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ 15 ನಿಮಿಷ (10 ಜನ). 2)ಜನಪದ ಗೀತೆ (ತಂಡ) – (ಪ್ರಾದೇಶಿಕ ಭಾಷೆ) – 7 ನಿಮಿಷ, 10 ಜನ.
3) ಕಥೆ ಬರೆಯುವುದು (1000 ಪದಗಳಿಗೆ ಮೀರದಂತೆ) – ಕನ್ನಡ/ಆಂಗ್ಲ/ ಹಿಂದಿ ಭಾಷೆಯಲ್ಲಿ – 60 ನಿಮಿಷ (ವೈಯಕ್ತಿಕ)
4) ಚಿತ್ರಕಲೆ (A3 Size  11.7” x 16.5”)- 90 ನಿಮಿಷ (ವೈಯಕ್ತಿಕ)
5) ಘೋಷಣೆ (Declamation)-ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಇರಬೇಕು. ಸ್ಪರ್ಧಿಗಳು ಸಿದ್ಧಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ 7 ನಿಮಿಷಗಳ ಭಾಷಣ ಮಾಡಬೇಕು.  7 ನಿಮಿಷ, (ವೈಯಕ್ತಿಕ)
6) ಕವಿತೆ ಬರೆಯುವುದು– ಹಿಂದಿ/ಆಂಗ್ಲ/ಪ್ರಾದೇಶಿಕ ಭಾಷೆಯಲ್ಲಿ)  90 ನಿಮಿಷ (ವೈಯಕ್ತಿಕ)
7) ವಿಜ್ಞಾನ ಮೇಳ (Exhibition of Science Mela)- ರಾಜ್ಯ ಮಟ್ಟದವರೆಗೆ ಮಾತ್ರ  ಆಯೋಜಿಸಲಾಗುವುದು. – 5 ಜನ (ಪ್ರತಿ ಗುಂಪಿಗೆ).
ಭಾಗವಹಿಸಲು ಇಚ್ಚಿಸುವ ಸ್ಪರ್ಧಾಳುಗಳು ಅಕ್ಟೋಬರ್ 26 ರಂದು ಬೆಳಿಗ್ಗೆ 9 ಗಂಟೆಯೊಳಗೆ ವರದಿ ಮಾಡಿಕೊಳ್ಳಬೇಕು. ಭಾಗವಹಿಸುವ ಸ್ಪರ್ಧಾಳುಗಳು 15 ರಿಂದ 29 ವರ್ಷದವರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯವರಾಗಿರಬೇಕು. ಜನ್ಮ ದಿನಾಂಕ ದೃಢೀಕರಣ ದಾಖಲೆಯನ್ನು ತಪ್ಪದೇ ಹಾಜರುಪಡಿಸಬೇಕು. ಭಾಗವಹಿಸುವವರಿಗೆ ಪ್ರಯಾಣ ಭತ್ಯೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ ತಪ್ಪದೇ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ತರಬೇಕು.
ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು (ದೂರವಾಣಿ ಸಂಖ್ಯೆ-0824-2451264/ ಅಧೀಕ್ಷಕರು-8105100781 ಅಥವಾ 7899266697) ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






error: Content is protected !!
Scroll to Top