(ನ್ಯೂಸ್ ಕಡಬ) newskadaba.com ಅ. 13. ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಮಂಗಳೂರು ಇದರ ವತಿಯಿಂದ ಅಕ್ಟೋಬರ್-2025ರ ಮಾಹೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ.
ತರಬೇತಿ ವಿವರ:- ಅಕ್ಟೋಬರ್ 16ರಿಂದ 17ರವರೆಗೆ ರೈತರಿಗೆ ಕೋಳಿ ಸಾಕಾಣಿಕೆ ತರಬೇತಿ ಹಾಗೂ ಅಕ್ಟೋಬರ್ 28 ರಿಂದ 29ರ ವರೆಗೆ ಹಂದಿ ಸಾಕಾಣಿಕೆ ತರಬೇತಿ ನೀಡಲಾಗುತ್ತದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿ ಮಾಡಿಕೊಳ್ಳಲು ಮಂಗಳೂರು ತಾಲೂಕು ದೂ.ಸಂ– 9243306956/ 0824-2950369, ಉಳ್ಳಾಲ ತಾಲೂಕು ದೂ.ಸಂ – 9880424077, ಮುಲ್ಕಿ ತಾಲೂಕು ದೂ.ಸಂ – 8971024282, ಮೂಡಬಿದ್ರೆ ತಾಲೂಕು ದೂ.ಸಂ – 7204271943, ಬಂಟ್ವಾಳ ತಾಲೂಕು ದೂ.ಸಂ – 9448253010, ಬೆಳ್ತಂಗಡಿ ತಾಲೂಕು ದೂ.ಸಂ – 9481963820, ಪುತ್ತೂರು ತಾಲೂಕು ದೂ.ಸಂ – 9483920208, ಕಡಬ ತಾಲೂಕು ದೂ.ಸಂ – 9483922594, ಸುಳ್ಯ ತಾಲೂಕು ದೂ.ಸಂ – 9844995078 ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








