ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.25. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಳೆದ ಒಂದು ವರ್ಷದಿಂದ ಸಂದರ್ಭ ಸಿಕ್ಕಿದಾಗಲೆಲ್ಲ ಲೈಂಗಿಕ ಕಿರುಕುಳ ನೀಡುತ್ತಿದ್ದುದಲ್ಲದೆ ಯಾರಲಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪುತ್ತೂರು ಕಸಬಾ ಗ್ರಾಮದ ನೆಹರೂ ನಗರ ಮುರ ನಿವಾಸಿ ಶಂಷೇರ್ ಖಾನ್(50) ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ವರ್ಷದಿಂದ ಸಂದರ್ಭ ಸಿಕ್ಕಾಗೆಲ್ಲ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದ್ದು, ಅಡ್ಡಿ ಪಡಿಸಿದಾಗ ಹಲ್ಲೆ ನಡೆಸುತ್ತಿದ್ದನೆನ್ನಲಾಗಿದೆ. ರಾತ್ರಿ ಟಿ.ವಿ ಯಲ್ಲಿ ಉದ್ದೇಶಪೂರ್ವಕವಾಗಿ ಅಶ್ಲೀಲ ದೃಶ್ಯಾವಳಿಯನ್ನು ತೋರಿಸುತ್ತಿದ್ದುದಲ್ಲದೆ, ನಿದ್ದೆ ಮಾತ್ರೆಯನ್ನು ಕೊಟ್ಟು ಲೈಂಗಿಕ ಕ್ರಿಯೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಎಲ್ಲರಿಗೂ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಆರೋಪದಲ್ಲಿ ಬಾಲಕಿ ನೀಡಿದ ದೂರಿನಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Also Read  ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಂದಿನಿಂದ ಆ. 16ರ ವರೆಗೆ ಕಡಬದ 'ಬಿರಿಯಾನಿ ಹೌಸ್‌'ನಲ್ಲಿ ಮೆಗಾ ಆಫರ್ - ಫಿಶ್ ಐಟಂಗಳಿಗೆ ಎರಡು ದಿನಗಳ ಕಾಲ ವಿಶೇಷ ರಿಯಾಯಿತಿ

error: Content is protected !!
Scroll to Top