ಬಂಟ್ವಾಳದಲ್ಲೂ ಕಣದಿಂದ ಹಿಂದೆ ಸರಿದ ಎಸ್ಡಿಪಿಐ..?? ► ನಾಮಪತ್ರ ಹಿಂಪಡೆಯುತ್ತಾರಾ ರಿಯಾಝ್ ಫರಂಗಿಪೇಟೆ…!!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.24. ರಾಜ್ಯದ ಗಮನ ಸೆಳೆದಿದ್ದ ಕರಾವಳಿಯ ಪ್ರಮುಖ ವಿಧಾನಸಭಾ ಕ್ಷೇತ್ರವಾದ ಬಂಟ್ವಾಳದಲ್ಲಿ ಸಚಿವ ರಮಾನಾಥ ರೈಯವರಿಗೆ ಎದುರಾಳಿಯಾಗಿ ಸ್ಪರ್ಧಿಸಲು ಅಣಿಯಾಗಿದ್ದ ಎಸ್ಡಿಪಿಐ ಪಕ್ಷವು ಕೊನೆಯ ಹಂತದಲ್ಲಿ ಕಣದಿಂದ ಹಿಂದೆ ಸರಿದಿದೆಯೆನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಪಣತೊಟ್ಟಿದ್ದ ಎಸ್ಡಿಪಿಐ ಪಕ್ಷವು ಬಂಟ್ವಾಳದಲ್ಲಿ ಕೆಲವು ತಿಂಗಳುಗಳ ಮೊದಲೇ ಅಭ್ಯರ್ಥಿಯನ್ನಾಗಿ ರಿಯಾಝ್ ಫರಂಗಿಪೇಟೆ ಯವರನ್ನು ಘೋಷಣೆ ಮಾಡಿತ್ತಲ್ಲದೆ ಪ್ರಚಾರ ಕಾರ್ಯವನ್ನೂ ಕೈಗೊಂಡಿತ್ತು. ಅಲ್ಲದೆ ಅದ್ದೂರಿ ರ್ಯಾಲಿಯ‌ ಮೂಲಕ ತೆರಳಿ ನಾಮಪತ್ರವನ್ನೂ ಸಲ್ಲಿಸಲಾಗಿತ್ತು‌. ಎಸ್ಡಿಪಿಐ ಪಕ್ಷದ ಸ್ಪರ್ಧೆಯಿಂದ ಬಿಜೆಪಿಯು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಸ್ಡಿಪಿಐ ಪಕ್ಷವು ಕಣದಿಂದ ಹಿಂದೆ ಸರಿದಿದೆಯೆನ್ನಲಾಗಿದ್ದು, ಪಕ್ಷದ ಸ್ಪರ್ಧೆಯಿಂದ ಜಾತ್ಯಾತೀತ ಮತಗಳು ವಿಭಜನೆಗೊಂಡು ಬಿಜೆಪಿಗೆ ಲಾಭವಾಗುತ್ತದೆಯೆನ್ನುವ ಕಾರಣದಿಂದ ನಾಮ ಪತ್ರವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಬುಧವಾರದಂದು ಘೋಷಿಸಲಾಗುತ್ತದೆ ಎಂದ ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.

Also Read  ವಿಟ್ಲ: ವ್ಯಕ್ತಿಗೆ ಆ್ಯಸಿಡ್ ಎರಚಿದ ದಂಪತಿ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲೂ ಸ್ಪರ್ಧಿಸಲು ಮುಂದಾಗಿದ್ದ ಎಸ್ಡಿಪಿಐ ಪಕ್ಷವು ಕೊನೆಯ ಹಂತದಲ್ಲಿ ಸ್ಪರ್ಧೆಯಿಂದ ಹಿಂಜರಿದಿದ್ದು, ಖಾತೆ ತೆರೆಯಲು ಪರದಾಡುತ್ತಿದ್ದ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. 2013 ರ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲಕರವಾಗಿತ್ತು. ಈ ಚುನಾವಣೆಯಲ್ಲೂ ಜಾತ್ಯಾತೀತ ಮತಗಳು ವಿಭಜನೆಯಾಗಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಕೊನೆಯ ಕ್ಷಣದಲ್ಲಿ ಸುಳ್ಯ ಕ್ಷೇತ್ರದಲ್ಲಿ ಎಸ್ಡಿಪಿಐ ಪಕ್ಷವು ಸ್ಪರ್ಧೆಯಿಂದ ಹಿಂದೆ ಸರಿದಿದೆ ಎಂದು ಅಭ್ಯರ್ಥಿಯಾಗಿದ್ದ ಆನಂದ ಮಿತ್ತಬೈಲ್ ರವರು ಸ್ಪಷ್ಟಪಡಿಸಿದ್ದರು.

Also Read  ಉಳುಹಿಯ್ಯತ್ ನೀಡಲು ಉತ್ಸಾಹ ತೋರಿರಿ- ಅದು ನಿಮಗೆ ಸಿರಾತ್ ಸೇತುವೆಯಲ್ಲಿ ವಾಹನವಾಗಿ ನೆರವಾಗುತ್ತದೆ ➤ ಅಬ್ದುಲ್ ರಝಾಕ್ ಮದನಿ ಮಂಜನಾಡಿ

error: Content is protected !!
Scroll to Top