(ನ್ಯೂಸ್ ಕಡಬ) newskadaba.com, ಅ.04 ಕಡಬ: ದೇವಾಸ್ :- ಪ್ರೇಮಿಯೊಬ್ಬಳು ತನ್ನ ಪ್ರಿಯಕರನ ಮನೆಗೆ ಅವನನ್ನು ಭೇಟಿಯಾಗಲು ಬಂದು ಬರ್ಬರವಾಗಿ ಹತ್ಯೆಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪ್ರಿಯಕರ ತನ್ನ ಗೆಳತಿಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಗೊಂಡು ಆಕೆಯನ್ನು ಅತೀ ಭೀಕರವಾಗಿ ಹತ್ಯೆಗೈದಿದ್ದಾನೆ. ಈ ಘಟನೆ ಮಧ್ಯಪ್ರದೇಶದ ದೇವಾಸ್‍ನ ಕಾಲೋನಿಯಲ್ಲಿ ನಡೆದಿದೆ. ಈ ಹುಚ್ಚು ಪ್ರೇಮಿ ಆಕೆಯ ಕೈಕಾಲು ಹಗ್ಗದಿಂದ ಕಟ್ಟಿ ಅವಳನ್ನು ಡ್ರಮ್‍ನಲ್ಲಿ ಮುಳುಗಿಸಿ ಕೊಂದು ನಂತರ ಪರಾರಿಯಾಗಿದ್ದನು. ಎರಡು ದಿನಗಳ ನಂತರ, ಆರೋಪಿ ಪೋಲೀಸ್ ಠಾಣೆಗೆ ಶರಣಾಗಿದ್ದಾನೆ.
22 ವರ್ಷದ ಲಕ್ಷಿತಾ ಚೌಧರಿ ಮತ್ತು ಮೋನು ಎಂಬ ಯುವಕ ಸ್ವಲ್ಪ ಸಮಯದಿಂದ ಪ್ರೀತಿಯಲ್ಲಿ ಬಿದ್ದಿದ್ದಾರೆ ಆದರೆ, ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಲಕ್ಷಿತಾಳ ಗೆಳೆಯನಿಗೆ ಆಕೆಗೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಅನುಮಾನ ಬರಲು ಪ್ರಾರಂಭಿಸಿದೆ.ಲಕ್ಷಿತಾ ಕಾಲೇಜಿಗೆ ಹೋಗುತ್ತಿರುವುದಾಗಿ ಹೇಳಿ ತನ್ನ ಗೆಳೆಯನ ಮನೆಗೆ ಹೋದಾಗ, ಅವರ ನಡುವೆ ಮತ್ತೆ ಜಗಳವಾಯಿತು. ಪರಿಣಾಮವಾಗಿ, ಮೋನು ಆಕೆಯ ಕೈಕಾಲುಗಳನ್ನು ಕಟ್ಟಿ, ಡ್ರಮ್‍ನಲ್ಲಿ ಮುಳುಗಿಸಿ, ಕ್ರೂರವಾಗಿ ಕೊಂದನು. ನಂತರ ಅವನು ಪೆÇಲೀಸರಿಗೆ ಶರಣಾದನು. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.








