ಉಪ್ಪಿನಂಗಡಿಯ ನವಜೋಡಿಗೆ ವೈವಾಹಿಕ ಶುಭಾಶಯ ಕೋರಿದ ಪ್ರಧಾನಿ ಮೋದಿ ► ಪ್ರಧಾನಿಯ ಪತ್ರದಿಂದ ಮದುವೆ ಮನೆಯಲ್ಲಿ ಮೇರೆ ಮೀರಿದ ಸಂಭ್ರಮ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.23. ವಿವಾಹ ಕಾರ್ಯಕ್ರಮಕ್ಕೆ ತುಂಬಾ ಅಭಿಮಾನದ ಗಣ್ಯ ವ್ಯಕ್ತಿಗಳು ಆಗಮಿಸಿದರೆ ಎಲ್ಲರಿಗೂ ತುಂಬಾ ಸಂತೋಷವಾಗುವುದು ಸಹಜ. ಅಂತೆಯೇ ದೇಶದ ಪ್ರಧಾನಿಯೇ ದೇಶದ ನಾಗರಿಕರೊಬ್ಬರ ವಿವಾಹಕ್ಕೆ ಶುಭಾಶಯ ಕೋರಿ ಪತ್ರ ಬರೆದರೆ ಸಂತಸ ಸಂಭ್ರಮ ಮುಗಿಲು ಮುಟ್ಟವುದು ಸಹಜ ತಾನೆ…?

ಉಪ್ಪಿನಂಗಡಿಯ ಹಿರಿಯ ಸಾಮಾಜಿಕ ಮುಂದಾಳು ಕಂಗ್ವೆ ವಿಶ್ವನಾಥ ಶೆಟ್ಟಿ ಹಾಗೂ ಶಾಂತ ಶೆಟ್ಟಿ ದಂಪತಿಯ ಪುತ್ರ ನಿಶಿತ್ ರವರ ವಿವಾಹವು ಬಜಪೆ ಮೇಗಿನ ಆರ್ಲ ಉದಯಶಂಕರ ಶೆಟ್ಟಿಯವರ ಪುತ್ರಿ ಡಾ| ಕೃತಿಕಾ ರವರೊಂದಿಗೆ ಎಪ್ರಿಲ್ 19 ರಂದು ನಡೆದಿದ್ದು, ವಿಶ್ವನಾಥ ಶೆಟ್ಟಿಯವರು ಅಭಿಮಾನದಿಂದ ತನ್ನ ಮಗನ ಆಮಂತ್ರಣ ಪತ್ರವನ್ನು ಪ್ರಧಾನಿ ಮೋದಿಗೆ ಕಳುಹಿಸಿದ್ದರು. ಪ್ರಧಾನಿಯವರಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗೆ ಶುಭಾಶಯ ಕೋರಿ ಪತ್ರ ಬಂದಿದ್ದು, ಮದುವೆ ಮನೆಯಲ್ಲಿ ಇದೀಗ ಸಂಭ್ರಮ ಮೇರೆ ಮೀರಿದೆ.

Also Read  ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರ ಪರಿಷ್ಕರಣೆ

error: Content is protected !!