‘ಮನಸ್ಸಿನಿಂದ ಮಾತನಾಡಬೇಕು, ಹೀಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ’; ಹೈದರಾಬಾದ್ ನ ವೇದಿಕೆ ಮೇಲೆ ಎಲ್ಲರ ಗಮನ ಸೆಳೆದ ರಿಷಬ್ ಶೆಟ್ಟಿ



(ನ್ಯೂಸ್‌ ಕಡಬ) newskadaba.com,  ಸೆ. 30 ಹೈದರಬಾದ್‌: ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ದೇಶಾದ್ಯಂತ 6 ಸಾವಿರಕ್ಕೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಕಾಣಲಿದೆ.ಈ ಸಿನಿಮಾದ ಬಜೆಟ್ 150 ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ರಿಷಬ್ ಶೆಟ್ಟಿ ಹಾಗೂ ತಂಡ ಹೈದರಾಬಾದ್​​​ಗೆ ತೆರಳಿ ಸಿನಿಮಾ ಪ್ರಚಾರ ಮಾಡಿದೆ. ಈ ಸಂದರ್ಭದಲ್ಲಿ ವೇದಿಕೆ ಮೇಲೆ ರಿಷಬ್ ಅವರು ಕನ್ನಡದಲ್ಲೇ ಮಾತನಾಡಿದರು ಅನ್ನೋದು ವಿಶೇಷ.





ಸಾಮಾನ್ಯವಾಗಿ ಬೇರೆ ರಾಜ್ಯದಲ್ಲಿ ಸಿನಿಮಾ ಪ್ರಚಾರಕ್ಕೆ ವೇದಿಕೆ ಏರಿದಾಗ ಕಲಾವಿದರು ಅಲ್ಲಿನ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ. ಇಲ್ಲವೇ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಭಾಷಣ ಇರುತ್ತದೆ. ಆದರೆ, ರಿಷಬ್ ಶೆಟ್ಟಿ ಅವರು ಹೈದರಾಬಾದ್​ನಲ್ಲಿ ನಡೆದ ‘ಕಾಂತಾರ: ಚಾಪ್ಟರ್ 1’ ಪ್ರೀ-ರಿಲೀಸ್ ಈವೇಂಟ್ ಅಲ್ಲಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ.






‘ಮನಸ್ಸಿನಿಂದ ಮಾತನಾಡಬೇಕು, ಹೀಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಅರ್ಥ ಆಗಿಲ್ಲ ಎಂದರೆ ಸಹೋದರ (ಜೂನಿಯರ್ ಎನ್​ಟಿಆರ್) ಟ್ರಾನ್ಸ್​ಲೇಷನ್ ಮಾಡುತ್ತಾರೆ. ಅವರನ್ನು ಫ್ರೆಂಡ್ ಎನ್ನಬೇಕಾ, ಸಹೋದರ ಎನ್ನಬೇಕಾ ಎಂಬುದೇ ಗೊತ್ತಾಗೋದಿಲ್ಲ. ಅವರು ನನ್ನೂರವರಂತೆ ಭಾಸವಾಗುತ್ತದೆ ಎಂದ ರಿಷಬ್. ಹೈದರಾಬಾದ್​ಗೆ ಬರ್ತೀನಿ ಎಂದಾಗ ನನ್ನ ಆಡಿಯನ್ಸ್​ಗೆ ನಿಮ್ಮನ್ನು ಪರಿಚಯಿಸ್ತೀನಿ ಎಂದು ಅವರೇ ಕರೆದುಕೊಂಡು ಬಂದು ನಿಲ್ಲಿಸಿದರು ಎಂದು ರಿಷಬ್‌ ಹೇಳಿದರು.

error: Content is protected !!
Scroll to Top