ತಿನ್ನಿರಿ ಸಿಹಿ ಸಿಹಿ ಆ್ಯಪಲ್ ಹಲ್ವಾ

ಬೇಕಾಗುವ ಸಾಮಾಗ್ರಿಗಳು:

  • ಸೇಬು(3)
  • ತುಪ್ಪ(1/4 ಬೌಲ್)
  • ಗೋಡಂಬಿ (3 ಚಮಚ)
  • ಸಕ್ಕರೆ(1 ಬೌಲ್)
  • ಕೇಸರಿ ಬಣ್ಣ
  • ಏಲಕ್ಕಿ ಪುಡಿ

ಮಾಡುವ ವಿಧಾನ :
ಮೊದಲು ಸೇಬುಗಳ ಸಿಪ್ಪೆ ತೆಗೆದು, ಸಣ್ಣಗೆ ಕತ್ತರಿಸಿ ರುಬ್ಬಿಕೊಳ್ಳಬೇಕು. ಇತ್ತ ಒಂದು ಬಾಣಲಿಗೆ 2 ಚಮಚ ತುಪ್ಪ ಹಾಕಿ ಗೋಡಂಬಿ ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಬೇಕು. ಅದೇ ಬಾಣಲಿಗೆ ರುಬ್ಬಿಕೊಂಡಿದ್ದ ಸೇಬನ್ನು ಹಾಕಿ ಸ್ವಲ್ಪ ಮಿಕ್ಸ್ ಮಾಡಬೇಕು. ನಂತರ ಸಕ್ಕರೆ, ಏಲಕ್ಕಿ ಪುಡಿ, ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 3 ಚಮಚ ತುಪ್ಪ ಹಾಕಿ, ಕೇಸರಿ ಬಣ್ಣವನ್ನು ಬೆರೆಸಿ ಅದಕ್ಕೆ ಉರಿದಿಟ್ಟುಕೊಂಡಿದ್ದ ಗೋಡಂಬಿ ಹಾಕಿ ಮತ್ತೆ 2 ಚಮಚ ತುಪ್ಪ ಹಾಕಿ 5 ನಿಮಿಷ ಫ್ರೈ ಮಾಡಿ ಬೇಯಿಸಿದರೆ ಸಿಹಿ ಸಿಹಿ ಆ್ಯಪಲ್ ಹಲ್ವಾ ತಿನ್ನಲು ಸಿದ್ಧ.

Also Read  ಮರ್ಧಾಳ: ಹೋಟೆಲ್ 'ಎಲೈಟ್ಸ್ ಮಂದಿ' ಶುಭಾರಂಭ - ಕಡಬ ತಾಲೂಕಿನ ಪ್ರಪ್ರಥಮ ಮಂದಿ ಬಿರಿಯಾನಿ ಹೋಟೆಲ್..!

error: Content is protected !!
Scroll to Top